

ಹುಮನಾಬಾದ್: ಲಿಂಗಾಯತ ಧರ್ಮ ಉಳಿದು ಬೆಳೆಯಬೇಕಾದರೆ ಇಷ್ಟಲಿಂಗ ಪೂಜೆ ಯೋಗ ಹಾಗೂ ವಚನ ಸಾಹಿತ್ಯ ಅಧ್ಯಯನ ನಿರಂತರವಾಗಿ ನಡೆಯಬೇಕೆಂದು ಬೀದರ್ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ನುಡಿದರು.
ಪಟ್ಟಣದಲ್ಲಿ ಬಸವ ಸೇವಾ ಪ್ರತಿಷ್ಠಾನ, ಶರಣ ಸಾಹಿತ್ಯ ಪರಿಷತ್ ಹಾಗೂ ಶ್ರೀ ಬಸವೇಶ್ವರ ಮಹಿಳಾ ಸೇವಾ ಸಂಘದ ಸಹಯೋಗದಡಿ ಮಂಗಳವಾರ ಆಯೋಜಿಸಿದ್ದ ಶ್ರಾವಣ ಮಾಸದ ವಚನ ಶ್ರವಣ ಕಾರ್ಯಕ್ರಮ ಸಮಾರೋಪ ಸಮಾರಂಭ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವವಾದಿ ಶರಣರು ತಮ್ಮ ನಿಜ ಜೀವನದಲ್ಲಿ ನಡೆದು ತೋರಿಸಿದ ವಿಷಯಗಳನ್ನೇ ವಚನ ಸಾಹಿತ್ಯ ಮೂಲಕ ನೀಡಿದ್ದಾರೆ. ಮಾನವ ಜೀವನಕ್ಕೆ ಬೇಕಾಗಿರುವ ಅತ್ಯಮೂಲ್ಯವಾದ ವಚನ ಸಾಹಿತ್ಯದಲ್ಲಿ ಅಡಗಿದೆ. ಇವುಗಳನ್ನು ಅಧ್ಯಯನ ಮಾಡಿ ಅಳವಡಿಸಿಕೊಂಡು ಕಾರ್ಯರೂಪಕ್ಕೆ ತರಬೇಕು. ಲಿಂಗಾಯತ ಧರ್ಮ ಬೆಳೆಯಬೇಕಾದರೆ ಇದರಲ್ಲಿರುವ ಒಳಪಂಗಡಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕೆಂದು ಹೇಳಿದರು.
ಬೀದರ್ ಅಕ್ಕಮಹಾದೇವಿ ಕಾಲೇಜಿನ ಪ್ರಾಧ್ಯಪಕಿ ಡಾ. ಧನಲಕ್ಷ್ಮೀ ಪಾಟೀಲ್ ಮಾತನಾಡಿದರು.
ನಿವೃತ್ತ ಇಂಜಿನಿಯರ್ ಸಿದ್ದಯ್ಯ ಕಾವಡಿಮಠ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸಾಹಿತಿ ಡಾ.ಸೋಮನಾಥ ಯಳವಾರ ಪ್ರಾಸ್ತಾವಿಕ ಮಾತನಾಡಿದರು.
ಶೈಕ್ಷಣಿಕ ಹಾಗೂ ಸಮಾಜ ಸೇವೆ ಗುರುತಿಸಿ ಬೆಂಗೂರಿನ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ಡಾ.ಅಂಬೇಡ್ಕರ್ ಹಾಗೂ ಎಪಿಜೆ ಅಬ್ದುಲ್ ಕಲಂ ಪ್ರಶಸ್ತಿಗೆ ಭಾಜನರಾದ ಬೀದರ್ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವಕುಮಾರ ಪಾಟೀಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಖ್ಯಾತ ಸಂಗೀತ ಕಲಾವಿದ ಶಿವಕುಮಾರ ಪಂಚಾಳ ತಂಡ ವಚನ ಸಂಗೀತ ನಡೆಸಿಕೊಟ್ಟರು. ಬಿಟಿವಿಪಿ ಶಿಕ್ಷಣ ಸಂಸ್ಥೆ ಕೇಂದ್ರ ಸಮಿತಿ ಉಪಾಧ್ಯಕ್ಷ ಕಂಟೆಪ್ಪ ದಾನಾ, ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಚನ್ನಬಸಪ್ಪ ವಡ್ಡನಕೇರಾ, ಸಂಘದ ತಾಲೂಕು ಅಧ್ಯಕ್ಷೆ ಶೋಭಾ ಔರಾದೆ, ಪ್ರಮುಖರಾದ ಶರಣಬಸಪ್ಪ ಪಾರಾ, ಮಡಿವಾಳಯ್ಯ ಸ್ವಾಮಿ, ಡಾ.ಎಸ್.ಆರ್.ಮಠಪತಿ, ಪಂಡಿತ ಬಾಳೂರೆ, ಶಂಕರ ನಂದಿ, ಕಾಶಪ್ಪ ದಾನಾ, ಸುಭಾಷ ವಾರದ, ಭಕ್ತರಾಜ ಚಿತ್ತಾಪುರೆ, ಪಂಢರಿನಾಥ ಹುಗ್ಗಿ, ಕಾಶಿನಾಥ ಕೊಡ್ಲಿ, ಶಿವಕುಮಾರ ಕಂಪ್ಲಿ, ಮಹೇಶ ಹುಡೇದ, ಸಿದ್ದಲಿಂಗ ನಿರ್ಣಾ, ಸರೋಜಾ ಕಲ್ಯಾಣಕರ, ಶಶಿಕಲಾ ರುದ್ರವಾಡಿ, ಕಸ್ತೂರಿ ಪಾಟೀಲ್, ಮಹಾನಂದ ರಟಕಲ್, ಈರಮ್ಮ ಕುಂಬಾರ ಇತರರಿದ್ದರು.
ಪ್ರತಿಷ್ಠಾನದ ಉಪಾಧ್ಯಕ್ಷ ಬಸವರಾಜ ರುದ್ರವಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಂಗಮಕರ ನಿರೂಪಣೆ ಮಾಡಿದರು.