ಜೂನಿಯರ್ ಇಂಡಿಯಾ ಹಾಕಿ ತಂಡಕ್ಕೆ ವಚನ್ ಆಯ್ಕೆ

4spt2- Vachan
Published on

ಸೋಮವಾರಪೇಟೆ: ಜೂನಿಯರ್ ಇಂಡಿಯಾ ಹಾಕಿ ತಂಡಕ್ಕೆ ಸೋಮವಾರಪೇಟೆಯ ಎಚ್.ಎ.ವಚನ್ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಮೇ 20ರಿಂದ 29ರ ತನಕ ಯುರೋಪ್‌ನಲ್ಲಿ ನಡೆಯುವ ಹಾಕಿ ಪಂದ್ಯಾವಳಿಯಲ್ಲಿ ಜೂನಿಯರ್ ಇಂಡಿಯಾ ತಂಡವನ್ನು ಪ್ರತಿನಿಧಿಸಲಿದ್ದಾರೆ. ಭಾರತ, ಜರ್ಮನಿ, ಬೆಲ್ಜಿಯಂ, ನೆದರ್‌ಲ್ಯಾಂಡ್ ದೇಶಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಸೋಮವಾರಪೇಟೆ ಕ್ಲಬ್ ರಸ್ತೆ ನಿವಾಸಿ ಎಚ್.ಎನ್.ಅಶೋಕ್ ಮತ್ತು ಸುಜಿನಿ ದಂಪತಿ ಪುತ್ರ ವಚನ್ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದು, ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಹಾಕಿ ತರಬೇತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net