

ಗದಗ: ಹನ್ನೆರಡನೆಯ ಶತಮಾನದಲ್ಲಿ ನಡೆದ ಬಸವಾದಿ ಶರಣರ ಕ್ರಾಂತಿಕಾರಿ ನಡೆ ಮತ್ತು ವಚನ ಮೂಲಕ ಸಮಾಜ ತಿದ್ದುವ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿವೆ. “ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯ ? ಬಯಲು ಬೆತ್ತಲೆಯಿದ್ದರೆ ಏನನುಡಿಸುವರಯ್ಯ? ಭಕ್ತನು ಭವಿಯಾದಡೆ ಏನನುಪಮಿಸುವೆನಯ್ಯ? ಗುಹೇಶ್ವರಾ’’ ಗುಡ್ಡ ಬೆಟ್ಟಗಳಿಗೆ ಚಳಿಯಾದರೆ, ಬಯಲು ಬೆತ್ತಲೆಯಾದರೆ ಏನು ಹೊದಿಸಲು, ಉಡಿಸಲು ನಮ್ಮಿಂದ ಸಾಧ್ಯವಾಗುವುದು. ಆದರೆ ಭಕ್ತನು ಭವಿಯಾದರೆ, ಶರಣ ಮಾರ್ಗ ಅನುಸರಿಸಿದರೆ ಸಾಧ್ಯವಾಗಬಹುದು. ಅಂದರೆ ಬಸವಣ್ಣನವರು ತಿಳಿಸಿದ ಕಳಬೇಡ ಕೊಲಬೇಡ ಹುಸಿಯ ನಡಿಯಲು ಬೇಡ…… ಎಂಬ ವಚನದಲ್ಲಿನ ಸಪ್ತ ಸೂತ್ರಗಳನ್ನು ಪಾಲಿಸಿದರೆ ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಲಾರವು. ಈಗಿರುವ ನಾನಾವಿಧ ಸಮಸ್ಯೆಗಳು ಇಲ್ಲದಾಗುವವು. ಈ ನಿಟ್ಟಿನಲ್ಲಿ ವಚನಗಳಿಂದ ಅನೇಕ ಸಮಸ್ಯೆಗಳಿಗೆ ಸಮಾಧಾನ ದೊರೆಯವದೆಂದು ಪತ್ರಕರ್ತರಾದ ಆಯ್. ಕೆ. ಮ್ಮಾರವರ ಅಭಿಮತವಾಗಿದೆ.
ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಕೇಂದ್ರ ಗದಗ ಮತ್ತು ಅಕ್ಕಮಹಾದೇವಿ ಯೋಗ ವಿe್ಞÁನ ಕೇಂದ್ರ ಇವರುಗಳ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರ (ಬಸಪ್ರಭೆ ಕ್ಯಾಂಪಸ್) ದಲ್ಲಿ ನಡೆದ 4 ನೇ ಶ್ರಾವಣ ಸೋಮವಾರದ ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮಕ್ಕೆ ವಚನ ಚಿಂತಕರಾಗಿ ಆಗಮಿಸಿದ ಆಯ್. ಕೆ. ಮ್ಮಾರವರು ಮುಂದುವರಿದು ಇತ್ತೀಚೆಗೆ ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಅವೆಲ್ಲವುಗಳಿಗೆ ವಚನಗಳು ಪರಿಹಾರ ಮಾರ್ಗೋಪಾಯಗಳಾಗಿವೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ-ಬೆಟಗೇರಿ ನಗರಸಭೆ ಮಾಜಿ ಅಧ್ಯP್ಷÀರಾದ ಶಿವಲೀಲಾ ಅಕ್ಕಿ ಅವರು ಸಾಪ್ತಾಹಿಕ ವಚನ ಶ್ರಾವಣ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದರಿಂದ ಜನತೆಗೆ ವಚನಗಳ ಮಹತ್ವದ ಅರಿವಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ನಿವೃತ್ತ ಇಂಜಿನಿಯರ ವಿ. ಎಚ್. ಪಾಟೀಲ, ದಾಸೋಹ ಸೇವಾಕರ್ತರಾದ ಶಕುಂತಲಾ ಬ್ಯಾಳಿ, ಶೋಭಾ ಭಾಂಡಗೆ ಉಪಸ್ಥಿತರಿದ್ದರು. ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ. ಎಸ್. ಪ¯್ಲÉÃದ, ಅಧ್ಯP್ಷÀತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ|| ಎಂ. ವಿ. ಐಹೊಳ್ಳಿ, ಜಿ. ಪಿ. ಕಟ್ಟಿಮನಿ, ಎಸ್. ಎನ್. ಹಕಾರೆ, ಡಾ|| ಎ. ಡಿ. ಹುಳಪ¯್ಲÉ, ವಿ. ಎಂ. ಮುಂದಿನಮನಿ, ಸುನಂದಾ ಅರಹುಣಸಿ, ಕುಸುಮಾ ಕುರಗೋಡ, ಜಯಶ್ರೀ ವಸ್ತçದ, ವಿಜಯಲಕ್ಷ್ಮೀ ಉಪವಾಸಿ, ಅನ್ನಪೂರ್ಣ ಅಸೂಟಿ, ಶಾಂತಾ ಮುಂದಿನಮನಿ ಇನ್ನಿತರೆ ಮಹನೀಯರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶಾಂತಾ ಕುಂದಗೋಳ ಸಾಮೂಹಿಕ ಬಸವ ಪ್ರಾರ್ಥನೆ ಹೇಳಿದರು. ಶಿವನಗೌಡ ಗೌಡರ ಸರ್ವರಿಗೂ ಸ್ವಾಗತ ಕೋರಿ, ಪ್ರಾಸ್ತಾವಿಕ ನುಡಿ ತಿಳಿಸಿದರು. ವಿಜಯಾ ಚನ್ನಶೆಟ್ಟಿ ವಚನ ಪಠಣ ಮಾಡಿದರು. ಯೋಗ ಪಾಠಶಾಲೆಯ ಸಕ್ರೀಯ ಕಾರ್ಯಕರ್ತರಾದ ಅಂದಾನೆಪ್ಪ ವಿಭೂತಿ ವಂದಿಸಿದರು. ಕೊನೆಯಲ್ಲಿ ವಚನ ಮಂಗಲ, ಪ್ರಸಾದ ವಿತರಣೆ ಕಾರ್ಯಗಳು ನಡೆದವು.