

ವಿಜಯಪುರ: ಬಸವಾದಿ ಶರಣರ ತತ್ವಕ್ಕೆ ವಿರುದ್ಧವಾದ ಹಾಗೂ ಬಸವ ತತ್ವವನ್ನು ಮರೆಮಾಚಲು ಆರ್ಎಸ್ಎಸ್ನವರು ವಚನ ದರ್ಶನ ಎಂಬ ವಿವಾದಾತ್ಮಕ ಪುಸ್ತಕ ರಾಜ್ಯದೆಲ್ಲೆಡೆ, ದೆಹಲಿಯಲ್ಲೂ ಬಿಡುಗಡೆ ಮಾಡಿದಾಗಲೂ ಕೂಡ ಬಸವಣ್ಣನವರ ಹೆಸರು ಹೇಳಿ ಅನ್ನ ತಿನ್ನುವ ಯಾವೊಬ್ಬ ಸ್ವಾಮಿಗಳು ಬೀದಿಗಿಳಿದು ಪ್ರತಿಭಟಿಸಲಿಲ್ಲ.
ಆದರೆ, ವಕ್ಫ್ ವಿಷಯದ ಕುರಿತು ಎಲ್ಲ ಸಮಸ್ಯೆಗಳನ್ನು ಮುಖ್ಯಮಂತ್ರಿ, ಸಚಿವ ಎಂ.ಬಿ. ಪಾಟೀಲರು ಕೇವಲ 48 ಗಂಟೆಗಳಲ್ಲಿ ಬಗೆಹರಿಸಿದ್ದರೂ ಸಹ ಕೋಮುವಾದಿ ಬಿಜೆಪಿ, ಆರ್ಎಸ್ಎಸ್ ಆವರ ರಾಜಕೀಯ ದುರುದ್ದೇಶಕ್ಕಾಗಿ ನಮ್ಮ ಬಸವನಾಡಿನ ಸ್ವಾಮಿಗಳು ತಮ್ಮ ಮಠಗಳನ್ನು ಬಿಟ್ಟು ಬೀದಿಗಿಳಿದಿರುವುದು ಖಾವಿ ಸಂಸತಿಗೆ ಹಾಗೂ ಬಸವಾದಿ ಶರಣರಿಗೆ, ಅಪಚಾರ ಮಾಡಿದಂತೆ ಎಂದು ರಾಷ್ಟ್ರೀಯ ಬಸವ ಸೇನಾ ಜಿಲ್ಲಾಧ್ಯ ಡಾ. ರವಿಕುಮಾರ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕಿಸಾನ್ ಸಂ ಎಂಬುದು ಬಿಜೆಪಿ ಸಂ ಪರಿವಾರದ ಅಂಗ ಸಂಸ್ಥೆಯಾಗಿದ್ದು, ರಾಜ್ಯದ ರೈತ ಸಂ ಹೋರಾಟ ಹಿಂತೆಗೆದುಕೊಂಡರೂ ಕೂಡ ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸುವ ಉದ್ದೇಶ ಹೊಂದಿರುವ ಈ ಸಂ ಪರಿವಾರದ ತಾಳಕ್ಕೆ ತಕ್ಕಂತೆ ಸ್ವಾಮೀಜುಗಳು ಕುಣಿಯುತ್ತಿದ್ದಾರೆ. ಅಲ್ಲದೆ, ಬಸವಣ್ಣನವರಿಗೆ ಆರ್ಎಸ್ಎಸ್ನವರು ಅಪಚಾರ ಮಾಡಿದಾಗ ಬೀದಿಗಿಳಿಯಬೇಕೆಂಬುದು ನೆನಪಾಗಲಿಲ್ಲ. ಸದ್ಯ ರಾಜಕೀಯ ಕಾರಣಕ್ಕೆ ಬೀದಿಗಿಳಿದಿದ್ದಾರೆ ಅವರಿಗೆ ಬಸವಣ್ಣನವರ ಹೆಸರು ಮಾತ್ರ ಬೇಕು. ಆದರೆ ಅವರ ತತ್ವಗಳು ಬೇಕಿಲ್ಲ. ಈ ರೀತಿ ಜನರಲ್ಲಿ ಒಡಕು ಮೂಡಿಸುವ ಹೋರಾಟಗಳಲ್ಲಿ ಭಾಗವಹಿಸುವುದು ಶರಣ ಪರಂಪರೆಗೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿದ ಅವರು, ಈ ರೀತಿಯ ಸ್ವಾಮೀಜಿಗಳ ನಡವಳಿಕೆ ಬಸವಾನುಯಾಯಿಗಳಲ್ಲಿ ಭ್ರಮ ನಿರಸನ ಉಂಟುಮಾಡಿದೆ ಎಂದು ಪ್ರಕಟಣೆ ಮೂಲಕ ಅವರು ಆಕ್ರೋಶ ಹೊರಹಾಕಿದ್ದಾರೆ.