ಕರೊನಾ ಲಸಿಕಾ ಮೆಗಾ ಮೇಳ ಯಶಸ್ವಿ ; ಒಂದೇ ದಿನ 122, 393 ಮಂದಿಗೆ ವ್ಯಾಕ್ಸಿನ್

17Tmk_Vaccine_Mela_01
Published on

ತುಮಕೂರು: ಜಿಲ್ಲೆಯಾದ್ಯಂತ ಶುಕ್ರವಾರ ಹಮ್ಮಿಕೊಂಡಿದ್ದ ಕರೊನಾ ಲಸಿಕಾ ಮೆಗಾ ಮೇಳ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಮೇಳದಲ್ಲಿ 1.25ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 1, 22, 393 ಮಂದಿಗೆ ಕರೊನಾ ಲಸಿಕೆ ನೀಡಲಾಗಿದೆ. ಶೇ.98 ಗುರಿ ಸಾಸಲಾಗಿದೆ. ಜನರು ಸಹ ಅಷ್ಟೇ ಅತ್ಯುತ್ಸಾಹದಿಂದ ಸಾಲುಗಟ್ಟಿ ನಿಂತು ಲಸಿಕೆ ಪಡೆದಿದ್ದು ಜಿಲ್ಲೆಯೆಲ್ಲಡೆ ಕಂಡುಬಂತು.

ಚುನಾವಣಾ ಮಾದರಿಯಲ್ಲಿಯೇ ಲಸಿಕಾ ಮೇಳ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಶುಕ್ರವಾರ ಬೆಳಗ್ಗೆ 7 ರಿಂದ ಸಂಜೆ 7.30ರವರೆಗೆ ಲಸಿಕಾಕರಣ ಅಭಿಯಾನ ಸುಸೂತ್ರವಾಗಿ ನಡೆಯಿತು. ಮೇಳದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕೆಂಬ ಗುರಿ ಇಟ್ಟುಕೊಳ್ಳಲಾಗಿತ್ತು. ಹಾಗಾಗಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಕಾರಿಗಳು ತಮ್ಮ ಅೀನದಲ್ಲಿ ಬರುವ ಎಲ್ಲ ಸಿಬ್ಬಂದಿ ಬಳಸಿಕೊಂಡು ಅಭಿಯಾನ ಯಶಸ್ವಿಗೊಳಿಸಿದರು.

460 ಲಸಿಕಾ ಕೇಂದ್ರ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕಾ ಕಾರ್ಯಕ್ಕಾಗಿ 460 ಲಸಿಕಾ ಕೇಂದ್ರಗಳನ್ನು ತೆರೆದು ಹೋಬಳಿ ಮಟ್ಟದಲ್ಲಿ ವಿವಿಧ ಇಲಾಖೆಯ ಅಕಾರಿಗಳನ್ನು 50 ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿತ್ತು. ಲಸಿಕೆ ಪಡೆಯಲು ಬೆಳಗ್ಗಿನಿಂದಲೇ ಜನರು ಸಾಲಿನಲ್ಲಿ ನಿಂತು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಲಸಿಕೆಯನ್ನು ಪಡೆದರು.

ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಸುತ್ತಿದ ಡಿಸಿ: ಕರೊನಾ ಲಸಿಕೆ ಮೆಗಾ ಮೇಳ ಯಶಸ್ಸಿಗೊಳಿಸಲು ಸಂಕಲ್ಪ ಮಾಡಿದ್ದ ಜಿಲ್ಲಾಕಾರಿ ವೈ.ಎಸ್.ಪಾಟೀಲ ಇಡೀದಿನ ಕಾಲಿಗೆ ಚಕ್ರಕಟ್ಟಿಕೊಂವರಂತೆ ಜಿಲ್ಲೆಯಲ್ಲಿ ಸುತ್ತಿದರು. ಪಾವಗಡ ಪಟ್ಟಣ, ಕೊರಟಗೆರೆ ತಾಲೂಕಿನ ತುಂಬಾಡಿ, ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಯಾವುದೇ ರೀತಿಯಲ್ಲೂ ಭಯ ಪಡದೆ ಲಸಿಕೆ ಪಡೆಯುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು. ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ ಸಾಥ್ ನೀಡಿದರು.

ಎಲ್ಲ ಪಿಎಚ್‌ಸಿಗಳಲ್ಲಿ ಅಗತ್ಯ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಶೇಖರಿಸಲಾಗಿತ್ತು. ಒಂದೇ ದಿನದಲ್ಲಿ 1.25 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಸಾಸಲು ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ರೋಟರಿ ಸಂಸ್ಥೆ, ರೆಡ್‌ಕ್ರಾಸ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆಯಲಾಯಿತು. ಜನರು ಸಹ ಸಾಲುಗಟ್ಟಿ ನಿಂತು ಲಸಿಕೆ ಪಡೆದರು. ಎಲ್ಲಿಯೂ ತೊಂದರೆ ಆಗಿಲ್ಲ. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

ತಾಲೂಕು ಗುರಿ ಸಾಧನೆ : ತುಮಕೂರು-29000, ಚಿಕ್ಕನಾಯಕನಹಳ್ಳಿ-11000, ಗುಬ್ಬಿ-11000, ಕೊರಟಗೆರೆ -8000, ಕುಣಿಗಲ್-11000, ಮಧುಗಿರಿ-11000, ಪಾವಗಡ-10000, ಶಿರಾ-14000, ತಿಪಟೂರು-12000, ತುರುವೇಕೆರೆ-8000 ಒಟ್ಟು 125000.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net