

ಬೆಳಗಾವಿ: ನಗರದ ಕೆಎಲ್‌ಇ ಸಂಸ್ಥೆಯ ಫಾರ್ಮಸಿ ಕಾಲೇಜು ಆವರಣದಲ್ಲಿ ಗುರುವಾರ ಫಾರ್ಮಸಿ ಪ್ರಾೃಕ್ಟಿಸ್ ವಿಭಾಗ, ಭಾರತೀಯ ಫಾರ್ಮಸ್ಯೂಟಿಕಲ್ ಅಸೋಸಿಯೇಷನ್ ಮತ್ತು ಅಂತಾರಾಷ್ಟ್ರೀಯ ಫಾರ್ಮಸ್ಯೂಟಿಕಲ್ ಫೆಡರೇಷನ್ ಅವರ ಸಹಯೋಗದಲ್ಲಿ ಲಸಿಕೆ ಯೋಜನೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಎಫ್‌ಐಪಿ-ಐಪಿಎ ಲಸಿಕೆ ಯೋಜನೆ ಯೋಜನಾ ವ್ಯವಸ್ಥಾಪಕ ಡಾ. ಮಾನಸಿ ದೋಷಿ, ಯೋಜನಾ ಮುಖ್ಯಸ್ಥ ಡಾ.ರಾಜ್ ವೈದ್ಯ, ಕೆಎಎಚ್‌ಇಆರ್ ರಿಜಿಸ್ಟ್ರಾರ್ ಡಾ.ಎಂ.ಎಸ್.ಗಣಾಚಾರಿ, ಕೆಎಲ್‌ಇ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಪ್ರೊ.ಸುನಿಲ್ ಜಲಾಲಪುರೆ, ಫಾರ್ಮಸಿ ಅಧ್ಯಯನ ವಿಭಾಗದ ಡೀನ್ ಡಾ.ವಿ.ಎಸ್. ಮಸ್ತಿಹೋಳಿಮಠ, ಉಪಪ್ರಾಂಶುಪಾಲ ಡಾ.ಎಂ.ಬಿ.ಪಾಟೀಲ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಡಾ. ಮಂಸಿ ದೋಷಿ ಮತ್ತು ಡಾ. ರಾಜ್ ವೈದ್ಯ ಮಾತನಾಡಿದರು. ಡಾ. ಶಶಿಕಲಾ ವಾಳಿ, ಅಧ್ಯಾಪಕರು ಇತರರಿದ್ದರು.