ಗ್ರಾಮೀಣರಿಗೆ ಮೊದಲು ಲಸಿಕೆ ; ಡಿಸ್ಕವರಿ ವಿಲೇಜ್ ಕಾರ್ಯಕ್ಕೆ ಸಂಸದ ಸುರೇಶ್ ಶ್ಲಾಘನೆ ಸಾವಿರ ಮಂದಿಗೆ ಉಚಿತ ಕೋವಿಶೀಲ್ಡ್

21 harohalli 1
??????
Published on

ಹಾರೋಹಳ್ಳಿ: ಗ್ರಾಮೀಣ ಜನರಿಗೆ ಮೊದಲು ಕರೊನಾ ಲಸಿಕೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ಸಾಮಾಜಿಕ ಹೊಣೆಗಾರಿಕೆ ತೋರುತ್ತಿರುವ ಡಿಸ್ಕವರಿ ವಿಲೇಜ್ ಕಾರ್ಯ ಶ್ಲಾಘನೀಯ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ಹಾರೋಹಳ್ಳಿ ಹೋಬಳಿಯ ಕಗ್ಗಲಹಳ್ಳಿ ಗ್ರಾಪಂ ವ್ಯಾಪ್ತಿಯ ವಡೇರಹಳ್ಳಿಯಲ್ಲಿರುವ ಡಿಸ್ಕವರಿ ವಿಲೇಜ್ ರೆಸಾರ್ಟ್‌ನಲ್ಲಿ ಸಂಸ್ಥೆ ವತಿಯಿಂದ ಸಾವಿರ ಜನರಿಗೆ ಶನಿವಾರ ಉಚಿತವಾಗಿ ಕೋವಿಶೀಲ್ಡ್ ಲಸಿಕೆ ಅಭಿಯಾನದಲ್ಲಿ ಮಾತನಾಡಿದರು.  ಎಲ್ಲರಿಗೂ ಲಸಿಕೆ ಸಿಗಲು ಇನ್ನೂ 6ರಿಂದ 8 ತಿಂಗಳು ಬೇಕು. ಉತ್ಪಾದನೆ ಕಡಿಮೆ ಇರುವುದರಿಂದ ಶೇ.30 ಜನರಿಗೆ ಲಸಿಕೆ ಹಾಕಲಾಗಿದೆ. ಕರೊನಾ 3ನೇ ಅಲೆ ಯಾವ ರೀತಿಯಲ್ಲಾದರೂ ಬರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಜಾಗೃತರಾಗಿ ಲಸಿಕೆ ಪಡೆಯಿರಿ ಮತ್ತು ಇತರರನ್ನು ಲಸಿಕೆ ಪಡೆಯುವಂತೆ ಪ್ರೇರೇಪಿಸಿ ಎಂದರು.

ಎರಡು ಡೋಸ್ ಲಸಿಕೆ ಪಡೆದರೆ ಕರೊನಾ ಬರುವುದಿಲ್ಲ ಎಂದು ಮೈಮರೆಯಬೇಡಿ. ತೀವ್ರತೆ ಕಡಿಮೆ ಇರುತ್ತದೆ. ಉಸಿರಾಟದ ತೊಂದರೆಯಂತಹ ತೀವ್ರತರವಾದ ಪರಿಣಾಮ ಬೀರುವುದಿಲ್ಲ. ಉತ್ತಮ ಆರೋಗ್ಯ ಸಿಗಬೇಕು ಎನ್ನುವುದು ಒಳ್ಳೆಯ ಧ್ಯೇಯವಾಗಿದೆ. ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದು ಸುರೇಶ್ ಹೇಳಿದರು.

ಊಹಾಪೋಹಕ್ಕೆ ಕಿವಿಗೊಡಬೇಡಿ: ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ಹುಸೇನ್ ಮಾತನಾಡಿ, ಕರೊನಾ ಬಗೆಗಿನ ಊಹಾಪೋಹದ ಮಾತುಗಳಿಗೆ ಕಿವಿಗೊಡಬೇಡಿ. ಆರೋಗ್ಯದ ಬಗ್ಗೆ ಜಾಗೃತರಾಗಬೇಕು. ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದೇವೆ. ಎಲ್ಲರೂ ಒಟ್ಟಿಗೆ ಹೋರಾಡೋಣ ಎಂದರು.

ಡಿಸ್ಕವರಿ ವಿಲ್ಲೇಜ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಮಾತನಾಡಿ, ಈ ಗ್ರಾಮವನ್ನು ಮಾದರಿಯನ್ನಾಗಿ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ. ಇಲ್ಲಿನ ಕೆರೆಗಳ ಅಭಿವೃದ್ಧಿ, ಕಸದ ಸಮಸ್ಯೆ ನಿವಾರಣೆ ಮಾಡುವುದರ ಜತೆಗೆ ಕಸ ಸಂಗ್ರಹಿಸಲು ಒಂದು ವಾಹನವನ್ನು ಉಚಿತವಾಗಿ ನೀಡಲಾಗುವುದು. ವೈಜ್ಞಾನಿಕ ಕಸ ವಿಲೇವಾರಿಗೆ ಎಲ್ಲ ನೆರವು ನೀಡಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬಮುಲ್ ನಿರ್ದೇಶಕ ಎಚ್.ಎಸ್. ಹರೀಶ್‌ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜಗದೀಶ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆಸಿಬಿ ಅಶೋಕ, ಮುಖಂಡರಾದ ಕೀರಣಗೆರೆ ಜಗದೀಶ್, ಮೋಹನ್‌ಹೊಳ್ಳ, ಸೌಭಾಗ್ಯಮ್ಮ, ಪಂಚೆಕೃಷ್ಣಪ್ಪ, ಗುರುಪ್ರಸಾದ್, ಎಚ್.ಸಿ.ಶೇಖರ್, ಕೋಟೆಕುಮಾರ್, ರಾಜಣ್ಣ, ನಂದಿನಿ ಶಿವಲಿಂಗಯ್ಯ, ಬಾಲಾಜಿನಾಯಕ್, ಸುಶೀಲ್‌ಕುಮಾರ್, ರವಿಕುಮಾರ್, ಬೆಣಚುಕಲ್ಲುದೊಡ್ಡಿರುದ್ರೇಶ್ ತಾಲ್ಲೂಕು ಪಂಚಾಯಿತಿ ಇಒ ಮಧು, ಗ್ರಾಪಂ ಪಿಡಿಒ ಸಿದ್ದಮುಗಿಲೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net