ರಾಸುಗಳಿಗೆ ಕಡ್ಡಾಯ ಲಸಿಕೆ ಹಾಕಿಸಿ

Vaccination program against foot-and-mouth disease
Vaccination program against foot-and-mouth disease in sulibele
Published on

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಪಶುಪಾಲನೆ ಮಾಡುವ ಹಾಗೂ ಹೈನುಗಾರಿಕೆ ಅವಲಂಬಿತ ರೈತಾಪಿ ವರ್ಗ ಯಾವುದೇ ಮೂಡನಂಬಿಕೆಗೆ ಒಳಗಾಗದೆ ಕಡ್ಡಾಯವಾಗಿ ಕಾಲುಬಾಯಿ ಜ್ವರ ಲಸಿಕೆ ಹಾಕಿಸುವ ಮೂಲಕ ರಾಸುಗಳನ್ನು ರೋಗದಿಂದ ಕಾಪಾಡಬೇಕು ಎಂದು ಶಾಸಕ ಶರತ್‌ಬಚ್ಚೇಗೌಡ ಹೇಳಿದರು.
ಹೋಬಳಿಯ ದೊಡ್ಡಹರಳಗೆರೆ ಗ್ರಾಮದಲ್ಲಿ ನ್ಯಾಷನಲ್ ಅನಿಮಲ್ ಡಿಸಿಸ್ ಕಂಟ್ರೋಲ್ ಪ್ರೋಗ್ರಾಮ್ ಅಡಿಯಲ್ಲಿ 4ನೇ ಸುತ್ತಿನ ಕಾಲುಬಾಯಿ ಜ್ವರ ರೋಗದ ವಿರುದ್ಧ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಪಶುಪಾಲನ ಇಲಾಖೆ ಹಾಗೂ ಬೆಂಗಳೂರು ಹಾಲು ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸೆ.26ರಿಂದ ಅ.10ರವರೆಗೆ ಕಾರ್ಯಕ್ರಮ ಜಾರಿಯಲ್ಲಿರುತ್ತದೆ, ರೈತರು ಇದರ ಪ್ರಯೋಜನ ಪಡೆಯಬೇಕು ಎಂದರು.
ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ ಮಾತನಾಡಿ, 4ನೇ ಸುತ್ತಿನ ಕಾರ್ಯಕ್ರಮವು ರಾಜ್ಯದ್ಯಂತ ಏಕಕಾಲದಲ್ಲಿ ಚಾಲನೆಗೊಂಡಿದ್ದು, ಪಶುಸಾಕಾಣಿಕೆದಾರರು ಯಾವುದೇ ಸಂಶಯವಿಲ್ಲದೇ ಧನ, ಕರುಗಳಿಗೆ ಲಸಿಕೆ ಹಾಕಿಸಿ ರೋಗಮುಕ್ತ ಮಾಡಬೇಕು. ತಾಲೂಕಿನಲ್ಲಿ 33,348 ರಾಸುಗಳಿದ್ದು, 248 ಗ್ರಾಮಗಳಲ್ಲಿ 4 ತಂಡಗಳ ಮೂಲಕ 25 ಮೇಲ್ವಿಚಾರಕರು, 60 ಮಂದಿ ಪಶು ವೈದ್ಯರು ಪಾಲ್ಗೊಂಡಿದ್ದಾರೆ ಎಂದರು.
ಹೊಸಕೋಟೆ ಶಿಬಿರದ ಉಪವ್ಯವಸ್ಥಾಪಕ ಡಾ.ಶಿವಾಜಿನಾಯಕ್ ಮಾತನಾಡಿ, ತಾಲೂಕಿನಲ್ಲಿ ಕಾಲುಬಾಯಿ ಜ್ವರದ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಮುಂಜಾಗೃತವಾಗಿ ಲಸಿಕೆ ಹಾಕಿಸಬೇಕು. ಲಸಿಕೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಇದಕ್ಕೆ ವ್ಯಾಪಕ ಾದ ಪ್ರಚಾರ ಮತ್ತು ಅರಿವು ಮೂಡಿಸಬೇಕು. ಒಂದು ಗ್ರಾಮದಲ್ಲಿ ಒಂದೇ ಒಂದು ರಾಸುವಿಗೂ ಸೊಂಕು ತಗಲಿದರೆ ಗ್ರಾಮದ ಎಲ್ಲ ರಾಸುಗಳಿಗೆ ತೊಂದರೆಯಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net