

ಹುಬ್ಬಳ್ಳಿ: ಜಾನುವಾರುಗಳಿಗೆ ಕಾಲು ಬಾಯಿ ಬೇನೆ ಲಸಿಕೆ ಹಾಕುವ ಎಂಟನೇ ಸುತ್ತಿನ ಕಾರ್ಯಕ್ರಮವನ್ನು ತಾಲೂಕಿನ ಅಮರಗೋಳ ಗ್ರಾಮದಿಂದ ಸೋಮವಾರ ಆರಂಭಿಸಲಾಯಿತು.
ಡಿಸೆಂಬರ್ 2ರ ವರೆಗೆ ತಾಲೂಕಿನ ಪ್ರತಿ ರೈತರ ಮನೆಗೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ತೆರಳಿ ಉಚಿತವಾಗಿ ಜಾನುವಾರುಗಳಿಗೆ ಕಾಲು ಬಾಯಿ ಬೇನೆ ಲಸಿಕೆ ಹಾಕಲಿದ್ದಾರೆ.
ಈ ಲಸಿಕೆ ಕಾರ್ಯಕ್ರಮವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೃಷಿಕ ಸಮಾಜ ನಗರ ಘಟಕದ ಅಧ್ಯಕ್ಷ ಕರಬಸಪ್ಪ ಬೆಟಗೇರಿ, ಪಶುವೈದ್ಯಾಧಿಕಾರಿ ಡಾ. ಪಿ.ಬಿ. ಬಣಕಾರ ಮನವಿ ಮಾಡಿದರು.