ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಲಸಿಕಾ ಅಭಿಯಾನ

sulibele 1
ಲಸಿಕಾ ಅಭಿಯಾನ
Published on

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಹೊಸಕೋಟೆ ತಾಲೂಕಿನ ದೊಡ್ಡಹರಳಗೆರೆ ಗ್ರಾಪಂ ವ್ಯಾಪ್ತಿಯ ನಗರೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ 5ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಏ.1 ರಿಂದ 30ರವರಗೆ ತಾಲೂಕಿನ ಎಲ್ಲ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಭಿಯಾನ ನಡೆಯಲಿದೆ.ಏ.1 ರಂದು ತೆನೆಯೂರು, ಚಿಕ್ಕಕೋಲಿಗ, ನಗರೇನಹಳ್ಳಿಗಳಲ್ಲಿ ಕಾರ್ಯಕ್ರಮ ಜರುಗಿತು. ಏ.2 ರಂದು ತಿಮ್ಮಪ್ಪನಹಳ್ಳಿ, ಬೆಂಡಿಗಾನಹಳ್ಳಿ, ಗುಳ್ಳಹಳ್ಳಿಗಳಲ್ಲಿ, ಏ.3ರಂದು ದೊಡ್ಡಹರಳಗೆರೆ, ತಮ್ಮರಸನಹಳ್ಳಿ, ಶಶಿಮಾಕನಹಳ್ಳಿ, ದ್ಯಾವಸಂದ್ರ, ಬಾಲೇನಹಳ್ಳಿಯಲ್ಲಿ, ಏ.4 ರಂದು ಬೆಟ್ಟಹಳ್ಳಿ, ಗಿಡ್ಡಪ್ಪನಹಳ್ಳಿ, ಸಿದ್ದೇನಹಳ್ಳಿ, ವಳೆಗೆರೆಪುರ, ಚಿಕ್ಕಹರಳಗೆರೆ, ಏ.5 ರಂದು ಟಿ.ಅಗ್ರಹಾರ, ಭುವನಹಳ್ಳಿ, ಭಾವಾಪುರ, ಹೊಸದಿಂಬಹಳ್ಳಿ, ಚೆನ್ನಿಗಲಾಪುರ, ಏ 6 ರಂದು ರಾಂಪುರ, ಕದಿರನಪುರ, ಅಂಕೋನಹಳ್ಳಿ, ಅರಸನಹಳ್ಳಿ, ನಲ್ಲಾಗನಹಳ್ಳಿ, ಏ 8ರಂದು ಸೂಲಿಬೆಲೆ, ಕೆಕೆಬೀಡು, ವಾಲ್ಮೀಕಿನಗರ, ಶಾಂತನಪುರಗಳಲ್ಲಿ, ಏ.10 ರಂದು ಕಮ್ಮಸಂದ್ರ, ಅತ್ತಿಬೆಲೆ, ಸಾದಪ್ಪನಹಳ್ಳಿ, ಏ.12 ರಂದು ಯನಗುಂಟೆ, ಹಸಿಗಾಳ ಗ್ರಾಮಗಳಲ್ಲಿ ಚಿಕಿತ್ಸಾ ಹಾಗೂ ಲಸಿಕಾ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net