ರೇಬಿಸ್ ಮುಕ್ತ ಭಾರತಕ್ಕೆ ಸಹಕಾರ

pashu
ವಿಶ್ವ ರೇಬಿಸ್ ದಿನಾಚರಣೆ ಪ್ರಯುಕ್ತ ಬ್ರಹ್ಮಾವರ ಪಶು ಆಸ್ಪತ್ರೆಯಲ್ಲಿ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ ನಡೆಯಿತು
Published on

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ

ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ರೇಬಿಸ್ ಮಾರಕವಾಗಿದೆ. ಜಾಗತಿಕವಾಗಿ ವರ್ಷಕ್ಕೆ 60 ಸಾವಿರ ಮಂದಿ ರೇಬಿಸ್‌ನಿಂದ ಮೃತಪಡುತ್ತಿದ್ದು, ಈ ಪೈಕಿ ಭಾರತ 4ನೇ ಸ್ಥಾನದಲ್ಲಿದೆ. 2030ಕ್ಕೆ ಭಾರತ ರೇಬಿಸ್ ಮುಕ್ತವಾಗಲು ಎಲ್ಲರೂ ಸಹಕರಿಸಬೇಕು ಎಂದು ಉಡುಪಿ ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಎಂ.ಸಿ.ರೆಡ್ಡಪ್ಪ ಹೇಳಿದರು.

ವಿಶ್ವ ರೇಬಿಸ್ ದಿನಾಚರಣೆ ಪ್ರಯುಕ್ತ ಬ್ರಹ್ಮಾವರ ಪಶು ಆಸ್ಪತ್ರೆಯಲ್ಲಿ ರೋಟರಿ ರೋಯಲ್ ಮತ್ತು ಇಂದ್ರಾಳಿ ಲಯನ್ ಮತ್ತು ಇಕೋ ಕ್ಲಬ್ ಸಹಕಾರದಲ್ಲಿ ಶನಿವಾರ ಉಚಿತ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರೋಟರಿ ರೋಯಲ್‌ನ ಗಣೇಶ್ ಪೂಜಾರಿ, ಲಯನ್ ಅಧ್ಯಕ್ಷ ಲಕ್ಷ್ಮೀಕಾಂತ್ ಬೆಸ್ಕೂರು, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಡಾ.ಮಹೇಶ್ ಐತಾಳ್, ಡಾ.ಮಹೇಶ್ ಶೆಟ್ಟಿ, ಡಾ.ಅನಿಲ್ ಕುಮಾರ್, ಡಾ.ವಿಶ್ವನಾಥ, ಡಾ.ಸವೋತ್ತಮ ಉಡುಪ, ಪುರುಶೋತ್ತಮ ಮಧ್ಯಸ್ಥ ಉಪಸ್ಥಿತರಿದ್ದರು. ಜ್ಯೋತಿ ಪ್ರಾರ್ಥಿಸಿದರು. ಪಶುವೈದ್ಯ ಡಾ.ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಡಾ.ಪ್ರದೀಪ್ ವಂದಿಸಿದರು. ಶ್ರೀನಿವಾಸ ತೋಡ್ತಿಲ್ಲಾಯ ಕಾರ್ಯಕ್ರಮ ನಿರೂಪಿಸಿದರು.

ತಾಲೂಕಿಗೆ 5 ಸಾವಿರ ಲಸಿಕೆ

ತಾಲೂಕು ವ್ಯಾಪ್ತಿಯ ಕೃಷಿ ಸಖಿಯರ ಆರೋಗ್ಯ ತಪಾಸಣೆ ಮತ್ತು ರೋಗನಿರೋಧಕ ಚುಚ್ಚುಮದ್ದು ನೀಡಲಾಯಿತು. ಬ್ರಹ್ಮಾವರ ತಾಲೂಕಿನಾದ್ಯಂತ 5000 ಲಸಿಕೆ ಪೂರೈಸಲಾಗುವುದು ಎಂದು ಪಶುಪಾಲನಾ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net