ಮಗುವಿನ ಆರೋಗ್ಯ ರಕ್ಷಣೆಗೆ ಲಸಿಕೆ ಹಾಕಿಸಿ

mtg
Published on

ಮೊರಟಗಿ: ಮಕ್ಕಳ ಆರೋಗ್ಯ ರಕ್ಷಣೆಗಾಗಿ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕೆಂದು ತಾಲೂಕು ಆರೋಗ್ಯ ಅಧಿಕಾರಿ ಆರೀಫ್ ಮಾಗಿ ಮನವಿ ಮಾಡಿದರು.

ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಪೋಲಿಯೋ ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

ಪೋಲಿಯೋ ಮಲೇರಿಯಾ, ಕಾಲರಾ, ಕುಷ್ಠರೋಗ, ಆನೇಕಾಲು ರೋಗ ಸೇರಿ ನಿಮ್ಮ ಆರೋಗ್ಯ ಕಾಪಾಡಲು ಸರ್ಕಾರ ಹಲವಾರು ಉಚಿತ ಯೋಜನೆಗಳನ್ನು ನೀಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ವೈದ್ಯಾಧಿಕಾರಿ ಡಾ. ಗಿರೀಶ ಪಾಟೀಲ, ನೇತ್ರಾಧಿಕಾರಿ ಶ್ವೇತಾ ಕೋರಿ, ಚನ್ನಬಸು ದೇಗಿಲ್, ಮಾಶಾಳ, ಮುಜಾವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net