ಬೀದಿನಾಯಿಗಳಿಗೆ ಎಬಿಸಿ ಲಸಿಕೆ ಹಾಕಿಸಿ

FotoJet 222
Published on

ಅಧಿಕಾರಿಗಳಿಗೆ ಡಿಸಿ ಡಾ.ಎಂ.ಆರ್​.ರವಿ ಸೂಚನೆ

ಕೋಲಾರ: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು ಸಂತಾನೋತ್ಪತ್ತಿ ತಡೆಯುವ ನಿಟ್ಟಿನಲ್ಲಿ ನಾಯಿಗಳಿಗೆ ಎಬಿಸಿ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅಧಿಕಾರಿಗಳಿಗೆ ಸೂಚಿಸಿದುರ.

ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆೋರಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸಮಗ್ರ ರೋಗಗಳ ಕಣ್ಗಾವಲು ಘಟಕದಿಂದ ಆಯೋಜಿಸಿದ್ದ ಜಿಲ್ಲಾ ಸರ್ವೇಕ್ಷಣಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವುರ, ನಾಯಿಗಳ ಹಾವಳಿ ಕುರಿತು ವ್ಯಾಪಕ ದೂುರಗಳು ಬಂದಿವೆ, ಸಮಸ್ಯೆ ನಿವಾರಣೆಗೆ ಕ್ರಮವಹಿಸಬೇಕು ಎಂದು ತಿಳಿಸಿದರು.

ಹುಚ್ಚು ನಾಯಿ ಅಥವಾ ಶಂಕಿತ ರೇಬಿಸ್​ನಿಂದ ನಾಯಿಗಳು ಮರಣಹೊಂದಿದ ಪ್ರಕರಣಗಳು ಕಂಡುಬಂದಲ್ಲಿ ಮಾಹಿತಿ ನೀಡಬೇಕು. ನಗಸರಭೆ ಸಿಬ್ಬಂದಿಗಳ ಜತೆ ಸಹಕರಿಸಿ ಬೀದಿ ನಾಯಿಗಳಿಗೆ ಲಸಿಕೆಗಳನ್ನು ನೀಡಲು ಪಶುಪಾಲನೆ ಮತ್ತು ಪಶು ವೈದ್ಯಕಿಯ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.

ನಗದಲ್ಲಿನ ಮಾಂಸದ ಅಂಗಡಿ, ಹೋಟೆಲ್​ಗಳವುರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಇುರವುದರಿಂದ ಬೀದಿನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಎಲ್ಲಂದರಲ್ಲಿ ತ್ಯಾಜ್ಯ ಬಿಸಾಡುವವರ ಬಗ್ಗೆ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ನಿಗಾವಹಿಸಿ ದಂಡ ವಿಧಿಸುವುದು, ಸೂಚನೆಗೆ ಬಗ್ಗದಿದ್ದೆರ ಪ್ರಕರಣ ದಾಖಲಿಸಲು ಮುಂದಾಗಬೇಕು ಎಂದು ತಿಳಿಸಿದುರ.

ಪ್ರಾಣಿಜನ್ಯ ರೋಗಗಳ ನಿಯಂತ್ರಣಕ್ಕಾಗಿ ಜಿಲ್ಲಾಮಟ್ಟದ ಕ್ಷಿಪ್ರ ಪ್ರತಿಕ್ರಿಯೆ ತಂಡದೊಂದಿಗೆ ಸಮನ್ವಯ. ವೈದ್ಯಕಿಯ ಮತ್ತು ಪಶುವೈದ್ಯಕಿಯ ವೃತ್ತಿಪರರ ಸಾಮರ್ಥ್ಯ ವೃದ್ಧಿ ಮತ್ತು ಜಂಟಿ ತರಬೇತಿ ನೀಡಬೇಕು. ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದೆರ ಪ್ರಾಣಿಜ್ಯ ರೋಗಳನ್ನು ತಡೆಯಬಹುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2025 ಆಗಸ್ಟ್​ವೆರಗೂ 7,887 ನಾಯಿ ಕಡಿತ ಪ್ರಕರಣಗಳು ಸಂಭವಿಸಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಕಡಿತದಿಂದಲೇ ಮನುಷ್ಯ ಆೋರಗ್ಯ ಸಮಸ್ಯೆ ಎದುರಿಸುತ್ತಾೆರ. ಇಂತಹ ಪ್ರಕರಣಗಳನ್ನು ಮಟ್ಟ ಹಾಕಲು ಸಮಿತಿಯು ಸಮರ್ಪಕವಾಗಿ ಬೀದಿ ನಾಯಿಗಳಿಗೆ ಎಬಿಸಿ ಮಾಡಿಸಬೇಕು ಎಂದು ಹೇಳಿದುರ.

ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಹಾವು, ಕೋತಿ, ನಾಯಿ, ಬೆಕ್ಕು ಕಡಿತ, ಇಲಿಯ ಮೂತ್ರದಿಂದ ಆಗುವಂತಹ ಆೋರಗ್ಯ ಸಮಸ್ಯೆ ನಿವಾರಣೆಗೆ ಪೂರಕ ಔಷಧ ದಸ್ತಾನು ಮಾಡಿರಬೇಕು ಎಂದು ತಿಳಿಸಿದುರ.

ಸಭೆಯಲ್ಲಿ ಜಿಲ್ಲಾ ಪಂಚಾಯತ್​ ಉಪ ಕಾರ್ಯದರ್ಶಿ ಟಿ.ಕೆ.ರಮೇಶ್​ ಜಿಲ್ಲಾ ಆೋರಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀನಿವಾಸ್​, ಜಿಲ್ಲಾ ಶಸ್ತ್ರಚಿಕಿತ್ಸಕ (ಪ್ರಭಾರ) ಡಾ.ಜಗದೀಶ್​, ಆರ್​ಸಿಎಚ್​ಒ ಡಾ.ಚಾರಣಿ ಇದ್ದುರ.

ಸಾರ್ವಜನಿಕರಲ್ಲಿ ಅರಿವು ಮೂಡಿಸಿ: ಗ್ರಾಮೀಣ ಆೋರಗ್ಯ ನೈರ್ಮಲ್ಯ ಸಮಿತಿಯಿಂದ ನಾಯಿ ಕಡತದ ಬಗ್ಗೆ ಅರಿವು ಮೂಡಿಸುವುದು. ಮಾಂಸದ ಅಂಗಡಿಯ ತ್ಯಾಜ್ಯಗಳನ್ನು ಸರಿಯಾದ ರೀತಿ ವಿಲೇವಾರಿ ಮಾಡುವುದು. ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲು ಪಂಚಾಯತ್​ ಾರಜ್​ ಇಲಾಖಾಧಿಕಾರಿಗಳು ಕ್ರಮವಹಿಸಬೇಕು. ಬಿಸಿ ರಕ್ತದ ಜೀವಿಗಳಲ್ಲಿ ೇರಬೀಸ್​ ವೈಸರ್​ನಿಂದ ಮೆದುಳಿನ ಉರಿಯೂತ ಉಂಟುಮಾಡುತ್ತದೆ. ಜನರ ಆೋರಗ್ಯದ ಮೇಲೆ ಪರಿಣಾಮವು ಬಾಧಿತ ಪ್ರಾಣಿಗಳ ಜನಸಂಖ್ಯೆಯ ಅಂದಾಜು ಮತ್ತು ಪ್ರಾಣಿಗಳಿಂದ ಮನುಷ್ಯರಿಗೆ ರೇಬೀಸ್​ ಹರಡುವುದನ್ನು ತಡೆಯಲು ಸಮಿತಿಯು ಕಾರ್ಯಪ್ರವೃತ್ತಾರಗಬೇಕು ಎಂದು ಡಿಸಿ ತಿಳಿಸಿದುರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net