

ತಾಳಿಕೋಟೆ: ತಾಲೂಕಿನ ಬಳಗಾನೂರ ಮತ್ತು ಮಿಣಜಗಿ ಗ್ರಾಮದಲ್ಲಿ ವಿಜಯಪುರದ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಸ್ಥಳೀಯ ರೈತ ಸಂಪರ್ಕ ಕೇಂದ್ರ ಸಹಯೋಗದಲ್ಲಿ ಬುಧವಾರ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ನಡೆಯಿತು.
ಬಳಗಾನೂರ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಪಶು ಸಂಗೋಪನೆ ವಿಷಯ ತಜ್ಞೆ ವಿಜಯಲಕ್ಷ್ಮೀ ಮುಂದಿನಮನಿ ಮಾತನಾಡಿ, ಬೇಸಿಗೆಯಲ್ಲಿ ಪಶುಗಳಿಗೆ ಬರತಕ್ಕಂತಹ ಕಾಲು ಬೇನೆ ಮತ್ತು ಬಾಯಿಬೇನೆ ರೋಗ ಮತ್ತು ದನಗಳಿಗೆ ಲಸಿಕೆ ಹಾಕಿಸುವ ಬಗ್ಗೆ ಮಾಹಿತಿ ನೀಡಿದರು.
ಬೇಸಾಯ ಶಾಸ ತಜ್ಞೆ ಶಿಲ್ಪಾ ಜೋಗಾಟಪುರ ಮಾತನಾಡಿ, ಈ ಭಾಗದಲ್ಲಿ ತೊಗರಿ ಬೆಳೆ ಮುಖ್ಯವಾಗಿ ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟಿದೆ. ಈ ತೊಗರಿ ಬೆಳೆಗೆ ತಗಲುವ ಕೀಟ ರೋಗ ಭಾದೆ ಮತ್ತು ಹತೋಟಿ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ಮಹೇಶ ಜೋಶಿ, ಬೀಜೋಪಚಾರ ಆಂದೋಲನದ ಮಹತ್ವ ಟ್ರ್ತ್ರೈಕೋಡರ್ಮಾ ಫೌಡರ ಮಹತ್ವ ವಿವರಿಸಿದರು.
ಮಿಣಜಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಕೇಂದ್ರದ ವಿಷಯ ತಜ್ಞರು ಹಾಗೂ ನಿವೇದಿ ಪಶುತಜ್ಞ ಡಾ. ಮಂಜುನಾಥ ರೆಡ್ಡಿ ಮಾತನಾಡಿ, ನಾಯಿ ಕಚ್ಚಿದಾಗ ಅದರಿಂದಾಗುವ ಅನಾಹುತ ಮತ್ತು ರೇಬಿಸ್ ಲಸಿಕೆ ಪಡೆಯುವ ಕುರಿತು ಮಾಹಿತಿ ನೀಡಿದರು.
ಶಿಲ್ಪಾ ಜೋಗಟಾಪೂರ ಅವರು ಹತ್ತಿ ತಳಿ, ತೊಗರಿ ತಳಿ, ಸೂಕ್ತ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.
ಕೃಷಿ ಇಲಾಖೆಯ ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಸಂಗಮೇಶ ಪಾಟೀಲ, ಸಂಜೀವಿನಿ ಸಿಬ್ಬಂದಿ ಕಿರಣಕುಮಾರ, ಅಪ್ಪು ಕುಂಟರೆಡ್ಡಿ, ಕೃಷಿ ಸಖಿಯರು, ಅಲ್ಲದೆ, ಮಿಣಜಗಿ ಮತ್ತು ಬಳಗಾನೂರ ಮತ್ತಿತರ ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.