ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ

Untitled design (2)
ಹನುಮಸಾಗರದ ಪಶು ಆಸ್ಪತ್ರೆಯಲ್ಲಿ ಕಾಲು ಬಾಯಿ ರೋಗ ನಿಯಂತ್ರಿಸಲು ನಾಲ್ಕನೇ ಸುತ್ತಿನ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆೆ ಚಾಲನೆ ನೀಡಲಾಯಿತು. ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಪಶು ಅಧಿಕಾರಿ ಎಂ.ಜಿ.ಹೊಳೆಆಲೂರ, ಸಿಬ್ಬಂದಿ ದಂಡಪ್ಪ, ಪೀರ್‌ಸಾಬ್, ಮಂಜುನಾಥ ಮಾಳಶೆಟ್ಟಿ ಪ್ರಮುಖರಾದ ನಾಗರಾಜ ಕಂದಗಲ್, ಮುತ್ತಣ್ಣ ಹಲಕೂಲಿ ಇತರರಿದ್ದರು.
Published on

ಹನುಮಸಾಗರ: ರೈತರು ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಕಾಲು ಬಾಯಿ ರೋಗಗಳಿಂದ ರಕ್ಷಿಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಹೇಳಿದರು.


ಪಟ್ಟಣದ ಪಶು ಆಸ್ಪತ್ರೆಯಲ್ಲಿ ಕಾಲು ಬಾಯಿ ರೋಗ ನಿಯಂತ್ರಿಸಲು ನಾಲ್ಕನೇ ಸುತ್ತಿನ ಲಸಿಕೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾನುವಾರುಗಳು ರೈತರ ಜೀವನಾಡಿಯಾಗಿದ್ದು, ಅವುಗಳನ್ನು ರಕ್ಷಿಸಿಕೊಳ್ಳುವುದು ರೈತರ ಕರ್ತವ್ಯ. ಕಾಲಕಾಲಕ್ಕೆ ಜಾನುವಾರುಗಳಿಗೆ ತಪಾಸಣೆ, ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದರು.


ಪಶು ಅಧಿಕಾರಿ ಎಂ.ಜಿ.ಹೊಳೆ ಆಲೂರ ಮಾತನಾಡಿದರು. ರೈತ ಸಂಘದ ಅಧ್ಯಕ್ಷ ಮುತ್ತಣ್ಣ ಹಲಕೂಲಿ, ಪಶುವೈದ್ಯ ಪರೀಕ್ಷಕ ದಂಡಪ್ಪ, ಪಶು ಸಖಿಯರಾದ ಲಕ್ಷ್ಮೀ ಬಡಿಗೇರ, ನಂದಿನಿ ಕಕ್ಕೇರಿ, ಪ್ರಮುಖರಾದ ನಾಗರಾಜ ಕಂದಗಲ್, ಮಾಬೂಸಾಬ್ ಹಿಂದಲಮನಿ, ದಾದೇಸಾಬ್ ಗುಡ್ಡದಬಾವಿ, ದ್ಯಾಮಣ್ಣ ಹಲಗಿಹೊಲದ, ಆಸಿಫ್ ಹೊಸಮನಿ, ಪೀರ್‌ಸಾಬ್ ಹೊಸಮನಿ, ಮಂಜುನಾಥ ಮಾಳಶೆಟ್ಟಿ, ದ್ಯಾಮಣ್ಣ ಕಟಗೇಲರ, ದೇವಪ್ಪ ಕೊಪ್ಪಳ, ಬಸವರಾಜ ಮಡಿವಾಳರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net