ಕಂಟಕವಾದ ಖಾಲಿ ನಿವೇಶನಗಳು

28-10-24
Published on

ವಿಕ್ರಮ ನಾಡಿಗೇರ ಧಾರವಾಡ ಹು-ಧಾ ಅವಳಿನಗರ ಜನರು ರಸ್ತೆಗಳಲ್ಲಿ ಕಸ ವಿಲೇವಾರಿ ಮಾಡುವುದನ್ನು ತಪ್ಪಿಸುವಲ್ಲಿ ಪಾಲಿಕೆ ಕೊಂಚ ಮಟ್ಟಿಗೆ ಯಶ ಕಂಡಿದೆ. ಆದರೆ ಸಂಪೂರ್ಣ ಪರಿಹಾರ ಹುಡುಕುವಲ್ಲಿ ವಿಫಲವಾಗಿದೆ. ಇದಕ್ಕೆ ಖಾಲಿ ನಿವೇಶನಗಳೇ ಜ್ವಲಂತ ಸಾಕ್ಷಿ. ಅವಳಿನಗರದಲ್ಲಿ ಖಾಲಿ ನಿವೇಶನಗಳಿಗೆ ಬರ ಇಲ್ಲ. ಬಹುತೇಕ ಬಡಾವಣೆಗಳಲ್ಲಿನ ನಿವೇಶನಗಳು ಡಂಪಿಂಗ್​ ಯಾರ್ಡ್​ ಆಗಿವೆ. ಆಳೆತ್ತರ ಗಿಡ-ಕಂಟಿ ಬೆಳೆದು ವಿಷ ಜಂತುಗಳ ವಾಸ ಸ್ಥಾನ ಆಗಿವೆ. ಅಕ್ಕಪಕ್ಕದ ನಿವಾಸಿಗಳು ಭಯದಲ್ಲೇ ಜೀವನ ಸಾಗಿಸುವಂತಾಗಿದೆ. ಅನೇಕರು ಹೂಡಿಕೆಗೆ ನಿವೇಶನ ಖರೀದಿಸಿ ವಿದೇಶ, ಅನ್ಯ ರಾಜ್ಯ, ಹೀಗೆ ಬೇರೆ ಕಡೆ ವಾಸವಾಗಿದ್ದಾರೆ. ತಮ್ಮ ನಿವೇಶನ ಸ್ವಚ್ಛಗೊಳಿಸುವಲ್ಲಿ ನಿರಾಸಕ್ತಿ ವಹಿಸುತ್ತಿದ್ದರೆ, ಕಸ, ತ್ಯಾಜ್ಯ ಎಸೆಯುವಲ್ಲಿ ಈ ಜಾಗಗಳು ಜನರಿಗೆ ಪ್ರಶಸ್ತ ತಾಣವಾದಂತಾಗಿವೆ. ಈ ವಿಷಯವಾಗಿ ಈ ಹಿಂದೆ ಕೆಲವರು ದೂರು ನೀಡಿದ ಹಿನ್ನೆಲೆಯಲ್ಲಿ ನಿವೇಶನಗಳನ್ನು ಸ್ವಚ್ಛವಾಗಿಡಬೇಕು ಎಂದು ಪಾಲಿಕೆ ಎಚ್ಚರಿಕೆ ನೀಡಿತ್ತು. ಆದರೂ ಮಾಲೀಕರು ಕ್ಯಾರೆ ಎನ್ನುತ್ತಿಲ್ಲ. ಇದರಿಂದ ಬೇಸತ್ತ ಪಾಲಿಕೆ, ಸ್ವತಃ ನಿವೇಶನ ಸ್ವಚ್ಛಗೊಳಿಸಿ ರ್ಖಚನ್ನು ಮಾಲೀಕರ ಕರದಲ್ಲಿ ಸೇರಿಸಲು ಮುಂದಾಗಿತ್ತು. ಆದರೆ ಸರಿಯಾಗಿ ಕಾರ್ಯ ರೂಪಕ್ಕೆ ಬಂದಿಲ್ಲ. ಹೀಗಾಗಿ ಪಾಲಿಕೆ ನಿರ್ಧಾರ ಪ್ರಚಾರಕ್ಕೆ ಸೀಮಿತವೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಖಾಲಿ ನಿವೇಶನ ಹೊಂದಿರುವ ಮಾಲೀಕರ ಪತ್ತೆ ಹಚ್ಚಿ ನೋಟಿಸ್​ ಜಾರಿ ಮಾಡುವುದು ಪಾಲಿಕೆಗೆ ಕಷ್ಟವಲ್ಲ. ಆರಂಭದಲ್ಲಿ ಈ ಕಾರ್ಯ ನಡೆಸಿದ ಅಧಿಕಾರಿಗಳಲ್ಲಿ ಇದೀಗ ನಿರಾಸಕ್ತಿ ಮೂಡಿದೆ. ಸ್ವಚ್ಛತೆಗೆ ಮೊದಲ ಆದ್ಯತೆ ಎಂದು ಹೇಳುವ ಮಹಾನಗರ ಪಾಲಿಕೆ ಇನ್ನಾದರೂ ಎಚ್ಚೆತ್ತುಕೊಂಡು ಖಾಲಿ ನಿವೇಶನಗಳ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಇದು ಮಾದರಿ ಕೆಲಸ: ಅವಳಿನಗರದ ಕೆಲ ಬಡಾವಣೆಗಳಲ್ಲಿ ನಿವೇಶನದ ಅಕ್ಕಪಕ್ಕದ ನಿವಾಸಿಗಳೇ ನಿವೇಶನ ಸ್ವಚ್ಛಗೊಳಿಸಿ ತಮ್ಮ ವಾಹನಗಳ ನಿಲುಗಡೆ ಸ್ಥಳ ಮಾಡಿಕೊಂಡಿದ್ದಾರೆ. ಇದು ರಸ್ತೆ ಪಕ್ಕ ವಾಹನ ನಿಲ್ಲಿಸುವುದು ತಪ್ಪಿಸುವುದು, ನಿವೇಶನ ಸ್ವಚ್ಛ ಇರುವುದು ಒಂದೆಡೆಯಾದರೆ, ಪಾಲಿಕೆ ನೋಟಿಸ್​, ದಂಡದಿಂದ ತಪ್ಪಿಸಿಕೊಳ್ಳಲು ಸುಲಭ ಮಾರ್ಗವಾಗಿದೆ.

*ರಾಮಪ್ಪ ಬಡಿಗೇರ, ಮೇಯರ್​ಖಾಲಿ ನಿವೇಶನಗಳ ಸ್ವಚ್ಛತೆ ವಿಷಯದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ವರ್ಷದಲ್ಲಿ ಎಷ್ಟು ಬಾರಿ ಸ್ವಚ್ಛತೆ?, ಸ್ವಚ್ಛತೆಗೆ ದರ ನಿಗದಿ ಸೇರಿ ಕೆಲ ಮಾನದಂಡಗಳನ್ನು ನಿಗದಿ ಮಾಡಬೇಕಿದೆ. ಹೀಗಾಗಿ ಈ ವಿಷಯವನ್ನು ಸಾಮಾನ್ಯ ಸಭೆಯಲ್ಲಿ ಮಂಡಿಸಿ, ಸದಸ್ಯರೊಂದಿಗೆ ಚಚಿರ್ಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ನಂತರದಲ್ಲಿ ಈ ಕಾರ್ಯ ರ್ಪೂಣಪ್ರಮಾಣದಲ್ಲಿ ಆರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net