

ಚಿಕ್ಕಬಳ್ಳಾಪುರ: ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಭರ್ತಿಯಾಗದಿರುವುದರಿಂದ ಒತ್ತಡ ಕೆಲಸದಲ್ಲಿ ಸಿಬ್ಬಂದಿ, ಗುಣಮಟ್ಟದ ಸೇವೆಗೆ ಜನರು ತೊಂದರೆ ಅನುಭವಿಸುವಂತಾಗಿದೆ.
ಹೌದು! ಜನಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಆಸ್ಪತ್ರೆಗಳಿಗೆ ಆಗಮಿಸುವ ರೋಗಿಗಳ ಪ್ರಮಾಣವು ಏರಿಕೆಯಾಗುತ್ತಿದೆ. ಇದಕ್ಕೆ ಅನುಗುಣವಾಗಿ ಮಾನವ ಸಂಪನ್ಮೂಲ, ಅಗತ್ಯ ಸೌಕರ್ಯಗಳನ್ನು ಒದಗಿಸುವಲ್ಲಿ ರ್ನಿಲಕ್ಷö್ಯ ತೋರಲಾಗುತ್ತಿದೆ. ಇರುವ ಸಿಬ್ಬಂದಿ ಮೇಲೆ ಹೆಚ್ಚಿನ ಕೆಲಸದ ಒತ್ತಡ ಹೇರುವುದು, ತಾತ್ಕಾಲಿಕವಾಗಿ ಗುತ್ತಿಗೆಯಾಧಾರಿತ ನೌಕರರ ನೇಮಕ ಸೇರಿದಂತೆ ಅಸಮರ್ಪಕ ನಿರ್ವಹಣೆಯಲ್ಲಿ ಕಾಲಹರಣ ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ 1, ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು 3, ತಾಲೂಕು ಆಸ್ಪತ್ರೆಗಳು 5, ಸಮುದಾಯ ಆರೋಗ್ಯ ಕೇಂದ್ರಗಳು 2, ದಿನನಿತ್ಯ ನಿರ್ವಹಣೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು 19, ಪ್ರಾಥಮಿಕ ಆರೋಗ್ಯ ಕೇಂದ್ರಗಳು 38, ನಗರ ಆರೋಗ್ಯ ಕೇಂದ್ರಗಳು 4, ನಮ್ಮ ಕ್ಲಿನಿಕ್ 6 ಸೇರಿದಂತೆ 78 ಆರೋಗ್ಯ ಸೇವಾ ಆಸ್ಪತ್ರೆಗಳಿವೆ. ಪ್ರಸ್ತುತ ಸಮುದಾಯ ಆರೋಗ್ಯಾಧಿಕಾರಿಗಳ 43 ಹುದ್ದೆಗಳು ಖಾಲಿ ಇವೆ. ರಾಜ್ಯದ ಹಂತದಲ್ಲಿ ನೇಮಕಾತಿ ಅಧೀಸೂಚನೆ ಮಾರ್ಗಸೂಚಿಸಿ ಹೊರಡಿಸಿದ ಬಳಿಕ ಭರ್ತಿ ಮಾಡುವುದರ ಬಗ್ಗೆ ಹೇಳಲಾಗುತ್ತಿದೆ. ಇನ್ನು ನಿಯಮಿತ ಹುದ್ದೆಗಳಿಗೆ ಸಂಬAಧಿಸಿದAತೆ 1502 ಮಂಜೂರಾತಿ ಪೈಕಿ 565 ಹುದ್ದೆಗಳು ಭರ್ತಿಯಾಗಿದ್ದು 937 ಹುದ್ದೆಗಳು ಖಾಲಿ ಇವೆ. ಹಾಗೆಯೇ ರಾಷ್ಟ್ರೀಯ ಆರೋಗ್ಯ ಮಿಷಿನ್ ಗುತ್ತಿಗೆಯಾಧಾರದ ಮೇಲೆ ಮಂಜೂರಾತಿಯ 809 ಹುದ್ದೆಗಳ ಪೈಕಿ 697 ಹುದ್ದೆಗಳು ಭರ್ತಿಯಾಗಿದ್ದು 110 ಹುದ್ದೆಗಳು ಖಾಲಿ ಇವೆ.
*1375 ಹಾಸಿಗೆ ವ್ಯವಸ್ಥೆ
ಆಂಧ್ರದ ಗಡಿ ಭಾಗದಲ್ಲಿರುವ ಜಿಲ್ಲೆಯಲ್ಲಿ 78 ಸರ್ಕಾರಿ ಆಸ್ಪತ್ರೆಗಳಿದ್ದು ಇಲ್ಲಿ 1375 ಹಾಸಿಗೆ ವ್ಯವಸ್ಥೆ ಇದೆ. ಇಲ್ಲಿ ಬೆಂಗಳೂರು ಮತ್ತು ಹೈದರಾಬಾದ್ ಮಾರ್ಗದ ರಾಷ್ಟ್ರೀಯ ಹೆದ್ದಾರಿ 44, ಮದನಪಲ್ಲಿ ಮತ್ತು ಮಧುಗಿರಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 69 ರಸ್ತೆ, ಪ್ರಮುಖ ರಾಜ್ಯ ಹೆದ್ದಾರಿಗಳು, ಗಡಿ ಭಾಗದ ರಸ್ತೆಗಳು ಈ ಭಾಗದಲ್ಲಿ ಹಾದು ಹೋಗಿವೆ. ಇಲ್ಲಿ ಅಪಘಾತಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಇದರಲ್ಲಿ ನಿರಂತರವಾಗಿ ಸಾವು ಮತ್ತು ಗಾಯಾಳುಗಳಾಗುವ ಪ್ರಕರಣಗಳು ವರದಿಯಾಗುತ್ತಿವೆ. ಮತ್ತೊಂದೆಡೆ ಕಲುಷಿತಗೊಂಡ ಅಂತರ್ಜಲ ಮಟ್ಟ ಕುಸಿತ, ಮಾರಕ ಲವಣಾಂಶಗಳನ್ನು ಹೊಂದಿರುವ ನೀರಿನ ಸೇವನೆಯಿಂದ ಫ್ಲೋರೋಸಿಸ್ ಸೇರಿದಂತೆ ನಾನಾ ಕಾಯಿಲೆಗಳಿಗೆ ಜನರು ಗುರಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವಂತಾಗಲು ಸಾಕಷ್ಟು ಸೌಕರ್ಯಗಳ ಅಗತ್ಯವಿದೆ.
*ಸರ್ಕಾರಿ ವೈದ್ಯಕಿಯ ಕಾಲೇಜ್
ಜಿಲ್ಲೆಯಲ್ಲಿ 810 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಂದಿ ಸರ್ಕಾರಿ ವೈದ್ಯಕಿಯ ಕಾಲೇಜ್ ಅನ್ನು ನಿರ್ಮಿಸಿದ್ದು ವಿದ್ಯಾರ್ಥಿಗಳಿಗೆ ವೈದ್ಯಕಿಯ ಶಿಕ್ಷಣ ತರಬೇತಿ (ಎಂಬಿಬಿಎಸ್) ಸಿಗುತ್ತಿದೆ. ಇನ್ನು ಇಲ್ಲಿ ವಿವಿಧ ಕಾಯಿಲೆಗಳ ಚಿಕಿತ್ಸೆ ನೀಡಲು ಆರೋಗ್ಯ ವ್ಯವಸ್ಥೆಯ ಅಗತ್ಯವಿದೆ. ಇದಕ್ಕಾಗಿ ಹೆಚ್ಚುವರಿಯಾಗಿ 300 ಕೋಟಿ ರೂ ಬೇಕಾಗುತ್ತದೆ ಎಂದೇಳಲಾಗುತ್ತಿದೆ. ಕಳೆದ 2023 ರಲ್ಲಿ ವೈದ್ಯಕಿಯ ಕಾಲೇಜ್ ಪ್ರಾರಂಭವಾಗಿದ್ದರೂ ಇಲ್ಲಿಯವರೆಗೂ ಅಗತ್ಯ ಸೌಕರ್ಯಗಳನ್ನು ಒದಗಿಸಿಲ್ಲ. ವೈದ್ಯಕಿಯ ವಿದ್ಯಾರ್ಥಿಗಳು ಬಸ್ಸಿನಲ್ಲಿ ಚಿಕ್ಕಬಳ್ಳಾಪುರದಲ್ಲಿನ ಜಿಲ್ಲಾಸ್ಪತ್ರೆ, ತಾಯಿ ಮಕ್ಕಳು ಮಕ್ಕಳ ಆಸ್ಪತ್ರೆಗೆ ಬಂದು ಪ್ರಾಯೋಗಿಕ ತರಬೇತಿಯನ್ನು ಪಡೆಯಬೇಕಾದ ಸ್ಥಿತಿ ಇದೆ.