

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಹಾಗೂ ವಾಣಿಜ್ಯ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆ. 1ರಂದು ಸಂಜೆ 5.30 ಗಂಟೆಗೆ ನಗರದ ಗೋಕುಲ ರಸ್ತೆಯಲ್ಲಿನ ಕ್ಯೂಬಿಕ್ಸ್ ಹೋಟೆಲ್ನಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಕೆಟಿಜಿ ಗ್ರುಪ್ ಆಫ್ ಕಂಪನಿಯ ಜೈರಾಮ್ ಕಿಮ್ಮನೆ, ಬೆಳಗಾವಿಯ ಓರಿಯನ್ ಹೈಡ್ರಾಲಿಕ್ಸ್ ಪ್ರೖೆವೇಟ್ ಲಿಮಿಟೆಡ್ನ ಕೀತ್ ಮಚಾಡೊ, ಹುಬ್ಬಳ್ಳಿಯ ಆನಂದ ಕಮತಗಿ, ಮೆ. ಎಕ್ಸೀಡ್ ಕ್ರಾಪ್ ಸೈನ್ಸ್ ಪ್ರೖೆ.ಲಿ.ನ ಚಂದ್ರಶೇಖರ ಬಾಗೇವಾಡಿ, ಬಳ್ಳಾರಿಯ ಶ್ರೀ ಸಾಯಿ ಗಣೇಶ ಕಾಟನ್ ಮಿಲ್ನ ಪಿ. ದೊಡ್ಡ ಬಸವನಗೌಡ ಹಾಗೂ ರಾಣೇಬೆನ್ನೂರಿನ ವಿಭಾ ಫ್ಯಾಶನ್ವೇರ್ನ ಹೇಮಲತಾ ಯಡಕಿ ಅವರಿಗೆ ವಾಣಿಜ್ಯ ರತ್ನ ಪ್ರಶಸ್ತಿ ವಿತರಿಸಲಾಗುವುದು ಎಂದರು.
ಹುಬ್ಬಳ್ಳಿಯ ವೈಡ್ ಮೊಬಿಲಿಟಿ ಮೆಕಾಟ್ರಾನಿಕ್ಸ್ ಪ್ರೖೆ. ಲಿಮಿಟೆಡ್ನ ಶೇಖರ ಬಸಣ್ಣ-ರೋಹಿಣಿ ಘಟಪಾಂಡೆ ಮತ್ತು ಆಸ್ಟ್ರ ಡಿಫೆನ್ಸ್ನ ಅಂಕುಶ ಕೊರವಿ ಅವರಿಗೆ ನವೋದ್ಯಮಿ ಪ್ರಶಸ್ತಿ ನೀಡಲಾಗುತ್ತದೆ. ಮಹಿಕೋ ಪ್ರೖೆ.ಲಿಮಿಟೆಡ್ನ ಚೇರಮನ್ ರಾಜೇಂದ್ರ ಬರವಾಲೆ, ಜೈರಾಮ್ ಕಿಮ್ಮನೆ ಪ್ರಶಸ್ತಿ ಪ್ರದಾನ ಮಾಡುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್.ಪಿ. ಸಂಶಿಮಠ, ಪ್ರಧಾನ ಕಾರ್ಯದರ್ಶಿ ಪ್ರವೀಣ ಅಗಡಿ, ಸಂಸ್ಥಾಪಕರ ದಿನಾಚರಣೆ ಚೇರ್ಮನ್ ದೀಪಕ ಪಾಟೀಲ, ಇತರರು ಇದ್ದರು.