ವಿ.ವಿ. ಕೊಳದ ಕಾಮಗಾರಿ ಪೂರ್ಣಗೊಳಿಸಲಿ

naveen
Published on

ಮೈಸೂರು: ಈಗ ಇರುವ ಈಜುಕೊಳಗಳನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂದು ಯುವ ಮುಖಂಡ ನವೀನ್ ಒತ್ತಾಯಿಸಿದ್ದಾರೆ.

ಸರಸ್ವತಿಪುರಂನಲ್ಲಿರುವ ಮೈಸೂರು ವಿವಿ ಕೊಳವನ್ನು ಕಾಮಗಾರಿ ಹಿನ್ನೆಲೆಯಲ್ಲಿ ಮುಚ್ಚಿ ಒಂಬತ್ತು ತಿಂಗಳಾಗಿದೆ. ಆದರೂ, ಇನ್ನೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ಇಲ್ಲಿ ನಿತ್ಯ ಈಜಾಡುತ್ತಿದ್ದ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಮೊದಲು ಮೈಸೂರು ವಿವಿ ಈಜುಕೊಳದ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net