ವಿ.ಶ್ರೀನಿವಾಸಪ್ರಸಾದ್ ಅವರ ವಿಚಾರ ಸ್ಪಷ್ಟತೆ, ವೈಚಾರಿಕ ನಿಲುವು ಅನುಕರಣೀಯ

shrinivasaprasad
Published on

ಮೈಸೂರು: ವಿ.ಶ್ರೀನಿವಾಸಪ್ರಸಾದ್ ಅವರ ವಿಚಾರ ಸ್ಪಷ್ಟತೆ, ವೈಚಾರಿಕ ನಿಲುವು ಅನುಕರಣೀಯ ಎಂದು ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಪರಿಷತ್ತು ನಿರ್ದೇಶಕ ಪ್ರೊ.ಡಿ. ಆನಂದ್ ತಿಳಿಸಿದರು.

ಮಾನಸಗಂಗೋತ್ರಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ವಿ.ಶ್ರಿನಿವಾಸಪ್ರಸಾದ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜಶಾಸ್ತ್ರಜ್ಞ, ರಾಜಕೀಯ ಪ್ರಾಧ್ಯಾಪಕರಂತಿದ್ದರು. ಸಾಂಸ್ಕೃತಿಕವಾಗಿ ಸಮಾಜಮುಖಿಯಾಗಿ ಅನುಕರಣೆ ಮಾಡಬೇಕಾದರೆ ಪ್ರಸಾದ್ ಹೆಸರು ತಟ್ಟನೆ ಹೊಳೆಯುತ್ತದೆ. ನೊಂದ ಜನಗಳಿಗೆ ದಾರಿದೀಪವಾಗಿದ್ದ ವಿ.ಶ್ರಿನಿವಾಸಪ್ರಸಾದ್ ಅವರು ನಂದ ದೀಪಾವಾಗಿ ನಮೊಂದಿಗೆ ಇದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net