ವಿ.ಶ್ರೀನಿವಾಸಪ್ರಸಾದ್ ನಿಧನಕ್ಕೆ ಕಂಬನಿ ಮಿಡಿದ ಸುತ್ತೂರು ಶ್ರೀ

6
Published on

ಹಳೆ ಮೈಸೂರು ಭಾಗದ ಹಿರಿಯ ಮುತ್ಸದ್ದಿಗಳಲ್ಲೊಬ್ಬರಾಗಿದ್ದ ವಿ.ಶ್ರೀನಿವಾಸಪ್ರಸಾದ್ ವಿಧಿವಶರಾದುದು ವಿಷಾದದ ಸಂಗತಿ ಎಂದು ಸುತ್ತೂರು ಶ್ರೀ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಿಷಾದಿಸಿದ್ದಾರೆ.

ನಾಡು ಒಬ್ಬ ಸಜ್ಜನ ಸಂಭಾವಿತ ರಾಜಕಾರಣಿಯನ್ನು ಕಳೆದುಕೊಂಡಿದೆ. ಕಳೆದ ಐದು ದಶಕಗಳಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದವರು. ಕಳೆದ ತಿಂಗಳಷ್ಟೆ ಸಕ್ರಿಯ ರಾಜಕೀಯದಿಂದ ನಿವೃತ್ತರಾಗಿದ್ದರು. ಆರು ಬಾರಿ ಸಂಸದರಾಗಿ, ಎರಡು ಬಾರಿ ಶಾಸಕರಾಗಿ, ಕೇಂದ್ರ, ರಾಜ್ಯ ಸಚಿವರಾಗಿ ನಿಸ್ಪೃಹ ಸೇವೆ ಸಲ್ಲಿಸಿದ್ದರು. ಸಮನ್ವಯ ದೃಷ್ಟಿ, ಮೆಲುಮಾತು, ವಿನಯ ಅವರ ವ್ಯಕ್ತಿತ್ವದ ಭಾಗಗಳಾಗಿದ್ದವು. ರಾಜೇಂದ್ರ ಸ್ವಾಮಿಗಳ ಕಾಲದಿಂದಲೂ ಅವರಶ್ರ ಶ್ರೀಮಠದೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಅವರ ಆತ್ಮಕ್ಕೆ ಶಾಂತಿಯನ್ನು, ಅವರ ಕುಟುಂಬವರ್ಗದವರು ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net