ರೈಲು ಗಾಲಿ ಕಾರ್ಖಾನೆಗೆ ಸಚಿವ ಸೋಮಣ್ಣ ಭೇಟಿ; ಪ್ರಗತಿ ಪರಿಶೀಲನೆ, ಅಧಿಕಾರಿಗಳೊಂದಿಗೆ ಚರ್ಚೆ

Somanna
Published on

ಬೆಂಗಳೂರು: ಯಲಹಂಕದ ರೈಲು ಗಾಲಿ ಕಾರ್ಖಾನೆಗೆ ಸೋಮವಾರ ರೈಲ್ವೆ ಮತ್ತು ಜಲಶಕ್ತಿ ಖಾತೆಗಳ ರಾಜ್ಯ ಸಚಿವ ವಿ.ಸೋಮಣ್ಣ ಭೇಟಿ ನೀಡಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಂದೇ ಸೂರಿನಡಿ ಕಾಸ್ಟ್​ ಗಾಲಿಗಳು, ಗಾಲಿಸೆಟ್​ಗಳನ್ನು ತಯಾರಿಸಲಾಗುತ್ತಿದೆ. ಈ ಕಾರ್ಖಾನೆ ಹಣ ಮಾಡಬೇಕೆಂಬ ಉದ್ದೇಶದಿಂದ ನಡೆಯುತ್ತಿಲ್ಲ. ಬದಲಾಗಿ ಸೇವಾ ಮನೋಭಾವದಿಂದ ಮುಂದುವರಿಯುತ್ತಿದೆ. ಹೀಗಾಗಿ ಮುಜಾಬಿಕ್​, ತಾಂಜಾನೆಯಾ, ಸುಡಾನ್​, ಮಲೇಷ್ಯಾ ಮೊದಲಾದ ರಾಷ್ಟ್ರಗಳಿಗೆ ರ್ತು ಮಾಡಲು ಸಾಧ್ಯವಾಗುತ್ತಿದೆ ಎಂದರು.

ವಂದೇ ಭಾರತ್​ ಸ್ಲೀಪರ್​ ಕೋಚ್​ ರೈಲುಗಳು ನಿರ್ಮಾಣ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಇನ್ನಷ್ಟೇ ಮೂರನೇ ಆಕ್ಸೆಲ್​ ಮೆಶೀನಿಂಗ್​ ಲೈನ್​ ಕೆಲಸ ಪ್ರಾರಂಭವಾಗಬೇಕಿದೆ. ಬಳಿಕ ಪ್ರೊಡಕ್ಷನ್​ ಪ್ರಕ್ರಿಯೆ ಶೇ.35-40 ಹೆಚ್ಚಲಿದೆ.

ಕೇಂದ್ರ ಸರ್ಕಾರದ ಸಂಪೂರ್ಣ ನೆರವಿನೊಂದಿಗೆ ಮುಂದಿನ 2 ವರ್ಷದೊಳಗೆ ಅಂಡರ್​ಪಾಸ್​ ಹಾಗೂ ಲೆವೆಲ್​ ಕ್ರಾಸಿಂಗ್​ ನಿರ್ಮಾಣವಾಗಲಿದೆ. ಈ ಅವಧಿಯಲ್ಲಿ ಗಾಲಿ ಕಾರ್ಖಾನೆ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈಲು ಗಾಲಿಗಳನ್ನು ತಯಾರು ಮಾಡಬೇಕಾಗಿದೆ ಎಂದರು.

ಈ ವೇಳೆ ಸಂಸದ ಡಾ.ಕೆ.ಸುಧಾರ್​, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಇತರರಿದ್ದರು.

ಅಧಿಕಾರಿಗಳಿಗೆ ಸೋಮಣ್ಣ ತರಾಟೆ!

ಗಾಲಿ ಕಾರ್ಖಾನೆಯಲ್ಲಿ ಸ್ವಾಗತಿಸಲು ಬಂದ ಅಧಿಕಾರಿಯೊಬ್ಬರನ್ನು ಸಚಿವ ಸೋಮಣ್ಣ ತರಾಟೆಗೆ ತೆಗೆದುಕೊಂಡ ಟನೆ ನಡೆಯಿತು. 'ನಾನು ನಿತ್ಯ ಹಿಂದಿ ಕಲಿಯುತ್ತಿದ್ದೇನೆ. ಸ್ಥಳಿಯ ಭಾಷೆ ಕಲಿಯಲು ನೀವ್ಯಾಕೆ ಮನಸ್ಸು ಮಾಡುತ್ತಿಲ್ಲ. ಜನರು ಕೇಳುವುದೊಂದು, ನೀವು ಹೇಳುವುದು ಒಂದು ಆದರೆ ಹೇಗೆ?' ಎಂದು ಕನ್ನಡ ಕಲಿಯದ ಅಧಿಕಾರಿಗಳನ್ನು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net