ವಿ.ಎಸ್. ಪಾಟೀಲ ಬಣ ಮೇಲುಗೈ

V.S. PATIL
Published on

ಮುಂಡಗೋಡ: ಭಾರಿ ಕುತೂಹಲ ಕೆರಳಿಸಿದ್ದ ತಾಲೂಕಿನ ಕಲಕೇರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯರ ಆಯ್ಕೆ ಚುನಾವಣೆಯಲ್ಲಿ ಮಾಜಿ ಶಾಸಕ ವಿ.ಎಸ್. ಪಾಟೀಲ ಬಣದವರು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ಮೇಲುಗೈ ಸಾಧಿಸಿದ್ದಾರೆ.

ತಾಲೂಕಿನ ಕಲಕೇರಿ ಸಹಕಾರಿ ಸಂಘದ ಸದಸ್ಯರ ಆಯ್ಕೆ ಚುನಾವಣೆ ಜೂ. 18ರಂದು ನಡೆದಿತ್ತು. ಕಾರಣಾಂತರದಿಂದ ಮತ ಎಣಿಕೆಯನ್ನು ಜು. 14ಕ್ಕೆ ನಿಗದಿಪಡಿಸಲಾಗಿತ್ತು. ಶುಕ್ರವಾರ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಗಳಿಸುವ ಮೂಲಕ ಜಯಭೇರಿ ಬಾರಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ನಾಗರಾಜ ಬೆಂಡಿಗೇರಿ, ನಾರಾಯಣ ತಿರಕಣ್ಣನವರ, ಬಲವಂತ ಚಿಗಪ್ಪನವರ, ಮಂಜುನಾಥ ಪಾಟೀಲ ಹಾಗೂ ವಿಠಲ ಚಿಗಪ್ಪನವರ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕೃಷ್ಣಪ್ಪ ವಡ್ಡರ, ಪರಿಶಿಷ್ಟ ಪಂಗಡದ ಅಭ್ಯರ್ಥಿಯಾಗಿ ಕೃಷ್ಣಪ್ಪ ಪೂಜಾರ, ಹಿಂದುಳಿದ ‘ಅ’ ವರ್ಗದಿಂದ ಮೌಲಾಲಿ ಹುಬ್ಬಳ್ಳಿ, ಹಿಂದುಳಿದ ‘ಬ’ ವರ್ಗದಿಂದ ಮಾಜಿ ಶಾಸಕ ವಿ.ಎಸ್. ಪಾಟೀಲ ಹಾಗೂ ಮಹಿಳಾ ಕ್ಷೇತ್ರದಿಂದ ಬಾಗುಬಾಯಿ ಶಿಂಧೆ ಹಾಗೂ ಸರಸ್ವತಿ ಮಶಾಳಕರ ಆಯ್ಕೆಯಾದರು. ಸಾಲಗಾರರಲ್ಲದ ಕ್ಷೇತ್ರದಿಂದ ಬಸಪ್ಪ ಧಾರವಾಡ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net