ಡಾ.ಗುರುರಾಜ ಕರ್ಜಗಿಯವರಿಗೆ 2024ನೇ ಸಾಲಿನ ವಿ. ಕೃ. ಗೋಕಾಕ್ ಪ್ರಶಸ್ತಿ

gk
Published on

ಬೆಂಗಳೂರು: ವಿನಾಯಕ ಗೋಕಾಕ್ ವಾಲ್ಮೀಯ ಟ್ರಸ್ಟ್ ಮತ್ತು ಭಾರತೀಯ ವಿದ್ಯಾಭವನ ಕೊಡಮಾಡುವ 2024ನೇ ಸಾಲಿನ ವಿ. ಕೃ ಗೋಕಾಕ್ ಪ್ರಶಸ್ತಿಗೆ ಶಿಕ್ಷಣತಜ್ಞ ಡಾ. ಗುರುರಾಜ ಕರ್ಜಗಿಯವರು ಆಯ್ಕೆಯಾಗಿದ್ದಾರೆ.

ಟ್ರಸ್ಟ್‌ನ ಅಧ್ಯಕ್ಷ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಅನಿಲ್ ಗೋಕಾಕ್, ಎಚ್.ಎನ್.ಸುರೇಶ್ ಮತ್ತು ಅಭಿನವ ರವಿಕುಮಾರ್ ರವರನ್ನೊಳಗೊಂಡ ಆಯ್ಕೆಸಮಿತಿಯು ಕಲಿಕಾ ಕ್ಷೇತ್ರದಲ್ಲಿ ತಮ್ಮ ಸೃಜನಶೀಲ ಆಲೋಚನೆಗಳ ಮೂಲಕ ವಿಶ್ವದಾದ್ಯಂತ ಪ್ರಸಿದ್ಧರಾಗಿರುವ ಗುರುರಾಜ ಕರ್ಜಗಿಯವರನ್ನು ಆಯ್ಕೆ ಮಾಡಿರುವುದಾಗಿ ೋಷಿಸಿದ್ದಾರೆ.

ಪ್ರಶಸ್ತಿಯು 25ಸಾವಿರ ನಗದು ಮತ್ತು ಫಲಕವನ್ನೊಳಗೊಂಡಿದ್ದು, ಸೆ.29ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸೆ.29 ಭಾನುವಾರ ಬೆಳಗ್ಗೆ 11ಕ್ಕೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಲೇಖಕರು ಮತ್ತು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಆಯ್ಕೆ ಸಮಿತಿಯ ಸದಸ್ಯರು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net