ವಿ.ಎಂ. ಪಾಟೀಲ ಕ್ರಿಯಾಶೀಲ ಆಡಳಿತಗಾರ

26 vikram 3
?????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಲಾ ಶಿಕ್ಷಣ ಇಲಾಖೆಯ ಅನೇಕ ಹುದ್ದೆಗಳಲ್ಲಿ ಚುರುಕಾಗಿ ಕೆಲಸ ನಿರ್ವಹಿಸಿ ಜನಪ್ರಿಯತೆ ಸಾಧಿಸಿದ್ದ ವಿ.ಎಂ. ಪಾಟೀಲ ಓರ್ವ ಕ್ರಿಯಾಶೀಲ ಆಡಳಿತಗಾರರಾಗಿದ್ದರು ಎಂದು ಹಿರಿಯ ಲೇಖಕ ವೆಂಕಟೇಶ ಮಾಚಕನೂರ ಹೇಳಿದರು.
ನಗರದ ಡಯಟ್​ ಸಭಾಭವನದಲ್ಲಿ ಡೆಪ್ಯೂಟಿ ಚೆನ್ನಬಸಪ್ಪ ಪ್ರಾಥಮಿಕ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಬುಧವಾರ ಏರ್ಪಡಿಸಿದ್ದ ನಿವೃತ್ತ ಡಿಡಿಪಿಐ ವಿ.ಎಂ. ಪಾಟೀಲ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಸಿದ್ಧರಾಮ ಮನಹಳ್ಳಿ ಮಾತನಾಡಿ, ಪಾಟೀಲ ಅವರು ಸೇವೆಯಲ್ಲಿ ಇರುವಾಗ ಮತ್ತು ನಿವೃತ್ತಿ ನಂತರವೂ ವಿದ್ಯಾವಿಕಾಸಕ್ಕೆ ಶ್ರಮಿಸಿದ್ದರು. ಶಿಕ್ಷಣ ಇಲಾಖೆಯಲ್ಲಿ ಇಂತಹ ಅಪರೂಪದ ವ್ಯಕ್ತಿ ಸೇವೆಗೆ ಸಿಗುವುದು ವಿರಳವಾಗಿದೆ ಎಂದು ಅಭಿಪ್ರಾಯಪಟ್ಟರು.
ಡಾ.ಬಿ.ಕೆ.ಎಸ್​.ವರ್ಧನ್​, ಮಧ್ವರಾಜ ಬಳ್ಳಾರಿ, ಎ.ಎಸ್​.ರಾಮಚಂದ್ರರಾವ್​, ಜಿ.ಆರ್​.ಕೆಂಚರಡ್ಡೇರ, ಎಸ್​.ಬಿ. ಕೊಡ್ಲಿ, ಆರ್​.ಸಿ. ಹಲಗತ್ತಿ, ಎ.ಎನ್​. ನಾಗರಳ್ಳಿ, ಜಯಶ್ರೀ ಕಾರೇಕರ, ಎಸ್​.ಡಿ.ನೀಲಣ್ಣವರ, ಪಾರ್ವತಿ ವಸ್ತ್ರದ, ಜಿ.ಆರ್​. ಭಟ್​, ಎಸ್​.ಎಸ್​. ಬೆಳವಟಿಗಿ, ರಾವೇಂದ್ರ ಸೊಂಡೂರ, ಮಲ್ಲಿಕಾರ್ಜುನ ಚಿಕ್ಕಮಠ, ಬಸವರಾಜ ಕುರಬೇಟ, ಶಾಮ ಮಲ್ಲನಗೌಡರ, ಗುರುಮೂತಿರ್ ಯರಗಂಬಳಿಮಠ, ಡಾ. ರಾಮೂ ಮೂಲಗಿ, ವಿ.ಎನ್​. ಕೀತಿರ್ವತಿ, ಕೆ.ಎಚ್​. ನಾಯಕ, ಆನಂದ ಪವಾರ ಮಾತನಾಡಿದರು.
ಗಿರೀಶ ಪದಕಿ, ಸಂಜೀವ ಬಿಂಗೇರಿ, ಉಮೇಶ ಬೊಮ್ಮಕ್ಕನವರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net