

ಮಂಗಳೂರು : ವಿ.ಕೆ.ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್-ಯೆಯ್ಯ್‌ಡಿ, ಕಲ್ಲಾಪು ತೊಕ್ಕೊಟ್ಟು, ವಾಮಂಜೂರು ಮತ್ತು ವಿ.ಕೆ.ಲಿವಿಂಗ್ ಕಾನ್ಸೆಪ್ಟ್ ಲೇಡಿಹಿಲ್‌ನಲ್ಲಿ ದಸರಾ ಮತ್ತು ದೀಪಾವಳಿ ಪ್ರಯುಕ್ತ ವಿಕೆ ಉತ್ಸವ್ -2023 ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಆಡಳಿತ ನಿರ್ದೇಶಕ ವಿಠ್ಠಲ್ ಕುಲಾಲ್ ಅವರು ದೀಪ ಬೆಳಗಿಸಿ ವಿ.ಕೆ.ಉತ್ಸವಕ್ಕೆ ಚಾಲನೆ ನೀಡಿದರು.
ವಿಕೆ-ಉತ್ಸವದಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಕಾರ್, ಸುಜುಕಿ ಆಕ್ಸೆಸ್ 125 ಸ್ಕೂಟರ್ ಹಾಗೂ 7 ಅತ್ಯಾಕರ್ಷಕ ಬಹುಮಾನಗಳಾದ ಬೆಡ್‌ರೂಂ ಸೆಟ್, ಸೋಫಾ ಸೆಟ್, ಡೈನಿಂಗ್ ಟೇಬಲ್, ಚಿನ್ನ, ಟಿವಿ, ರೆಫ್ರಿಜರೇಟರ್, ವಾಶಿಂಗ್‌ಮೆಶಿನ್ ಗೆಲ್ಲುವ ಅಪೂರ್ವ ಅವಕಾಶವಿದೆ. ವ್ಯಾಪಕ ಶ್ರೇಣಿಯ ಪೀಠೋಪಕರಣಗಳು ಮತ್ತು ಇಲೆಕ್ಟ್ರಾನಿಕ್ಸ್‌ಗಳ ಮೇಲೆ ಶೇ.50 ರಿಯಾಯಿತಿ ಆನಂದಿಸುವ ಅವಕಾಶ ವನ್ನೂ ಕಲ್ಪಿಸಲಾಗಿದೆ.
*ಶ್ರೇಷ್ಠ ಗುಣಮಟ್ಟದ ಪೀಠೋಪಕರಣ
ವಿವಿಧ ವಿನ್ಯಾಸದ ಸಮಕಾಲೀನ ಪೀಠೋಪಕರಣಗಳು, ಒಳಾಂಗಣದ ಸಾಂಪ್ರದಾಯಿಕ ಪೀಠೋಪಕರಣಗಳು, ಆಧುನಿಕ ಬೆಡ್‌ರೂಂ ಸೆಟ್ಸ್, ವಾರ್ಡ್‌ರೋಬ್ಸ್, ಮಂಚಗಳು, ಡೈನಿಂಗ್ ಸೆಟ್‌ಗಳು, ಲಿವಿಂಗ್ ರೂಮಿನ ಸೋಫಾ ಸೆಟ್ಸ್, ಸ್ಟಡಿ ಟೇಬಲ್‌ಗಳು, ಮೊಡ್ಯುಲರ್ ಕಿಚನ್‌ಗಳು, ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣಗಳು, ಕಸ್ಟಮೈಸ್ಡ್ ಮತ್ತು ರೆಡಿಮೇಡ್ ದೀರ್ಘಬಾಳಿಕೆ ಬರುವ ಗ್ರಾಹಕ ವಸ್ತುಗಳು ಯೋಗ್ಯವಾದ ಬೆಲೆಗೆ ಲಭ್ಯವಿವೆ. ಬ್ರಾಂಡೆಡ್ ಉತ್ಪನ್ನಗಳಾದ ಸ್ಪೇಸ್‌ವುಡ್ ಬೆಡ್‌ರೂಂ ಸೆಟ್ ಮತ್ತು ಫರ್ನಿಚರ್, ವಿ.ಕೆ. ಫರ್ನಿಚರ್ ಸೋಫಾ ತಯಾರಿಕೆಯಲ್ಲಿ ಪ್ರಸಿದ್ಧ ಬ್ರಾಂಡ್ ಆಗಿದೆ. ಎಕ್ಸ್‌ಕ್ಲೂಸಿವ್ ಡ್ಯುರೋಫ್ಲೆಕ್ಸ್ ಮ್ಯಾಟ್ರೆಸ್ ಮಳಿಗೆಯು ಇದಾಗಿದ್ದು ಕರ್ಲಾನ್ ಮತ್ತು ಇನ್ನಿತರ ಮ್ಯಾಟ್ರೆಸ್‌ಗಳು ಕೂಡಾ ಇಲ್ಲಿ ಲಭ್ಯವಿವೆ.
* ಆಯ್ಕೆಗೆ ವಿಪುಲ ಅವಕಾಶ
ವ್ಯಾಪಕವಾದ ಫರ್ನಿಚರ್, ಇಲೆಕ್ಟ್ರಾನಿಕ್ಸ್, ಇಂಟೀರಿಯರ್, ಫರ್ನಿಶಿಂಗ್, ಹೋಮ್ ಅಪ್ಲಾಯನ್ಸಸ್, ಮೊಬೈಲ್ಸ್, ಲ್ಯಾಪ್‌ಟಾಪ್ಸ್, ಕಿಚನ್‌ವೇರ್ಸ್, ಕ್ರೊಕರೀಸ್, ಗೃಹಾಲಂಕಾರ ಸಾಮಾಗ್ರಿಗಳು , ಮನೆ, ಕಚೇರಿ, ಸ್ಕೂಲ್-ಕಾಲೇಜು, ಮಸೀದಿ, ಚರ್ಚ್, ದೇವಾಲಯಗಳ ಸಾಮಾಗ್ರಿಗಳ ಖರೀದಿಗೆ ಮತ್ತು ಆಯ್ಕೆಗೆ ವಿಪುಲ ಅವಕಾಶವಿದೆ. ಅತೀ ಕಡಿಮೆ ಬೆಲೆಯಲ್ಲಿ ಆಯ್ಕೆಯ ವಸ್ತುಗಳನ್ನು ವಿಕೆ ಉತ್ಸವ್‌ನಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಬಜಾಜ್ ಫೈನಾನ್ಸ್ , ಎಚ್‌ಡಿಎಫ್‌ಸಿ, ಎಚ್‌ಡಿಬಿ ಮತ್ತು ಐಡಿಎಫ್‌ಸಿ ಫೈನಾನ್ಸ್ ಸಹಾಯದಿಂದ ಯಾವುದೇ ನಗದು ಹಣ ಪಾವತಿಸದೆ, ಸುಲಭದ ಮಾಸಿಕ ಕಂತುಗಳಲ್ಲಿ ಗ್ರಾಹಕರು ತಮ್ಮ ನೆಚ್ಚಿನ ಸಾಮಾಗ್ರಿಗಳನ್ನು ಖರೀದಿಸಬಹುದಾಗಿದೆ.
* ಅತ್ಯಪೂರ್ವ ಸಂಗ್ರಹ
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಇಲೆಕ್ಟ್ರಾನಿಕ್ಸ್ ಕಂಪೆನಿಗಳಾದ ಸ್ಯಾಮ್‌ಸಂಗ್, ಎಲ್‌ಜಿ, ಪ್ಯಾನಸೋನಿಕ್, ಸೋನಿ, ಹೈಯರ್, ವರ್ಲ್‌ಪೂಲ್, ಬಾಷ್, ಐಎಫ್‌ಬಿ, ಗೋದ್ರೆಜ್, ಓ ಜನ್ರಲ್, ಲೋಯ್ಡ, ಹ್ಯಾವೆಲ್ಸ್, ಡೈಕಿನ್, ವಿಗಾರ್ಡ್ ಮುಂತಾದ ಬ್ರಾಂಡುಗಳ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳಾದ ಟಿವಿ, ರೆಫ್ರಿಜರೇಟರ್, ಎಸಿ, ವಾಶಿಂಗ್ ಮೆಶಿನ್, ವಾಟರ್ ಹೀಟರ್, ವಾಟರ್ ಪ್ಯೂರಿಫೈಯರ್, ಚಿಮ್ನಿ ಮತ್ತು ಹಾಬ್ಸ್, ಕೂಲರ್, ಫ್ಯಾನ್ಸ್, ಗ್ರೈಂಡರ್, ಮಿಕ್ಸರ್, ಮೈಕ್ರೋವೇವ್ ಓವನ್, ಇಸ್ತ್ರಿಪೆಟ್ಟಿಗೆ, ಕ್ರಾಕರಿ ಮತ್ತು ಡೆಕೊರೇಟಿವ್ ಗೃಹಪಯೋಗಿ ಸಾಮಾಗ್ರಿಗಳು, ಸ್ಯಾಮ್‌ಸಂಗ್, ನೋಕಿಯಾ, ವಿವೊ, ಡೆಲ್, ಲೆನೊವೊ ಬ್ರಾಂಡುಗಳ ಮೊಬೈಲ್‌ಗಳು, ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತಿತ್ತರ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ಅತ್ಯಪೂರ್ವ ಸಂಗ್ರಹವಿದೆ.
* ವಿಶಾಲ ಶೋರೂಮ್‌ಗಳು
ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಫರ್ನಿಚರ್‌ಗಳನ್ನು ತಯಾರಿಸಿ ಕೂಡಾ ಕೊಡಲಾಗುವುದು. ಶೋರೂಮ್‌ಗಳು ವಿಶಾಲವಾಗಿದ್ದು, ವಾಹನ ನಿಲುಗಡೆಗೆ ವಿಪುಲ ಅವಕಾಶವಿದೆ. ಈ ಮಳಿಗೆಗಳು ರವಿವಾರವೂ ತೆರೆದಿರುತ್ತವೆ. ಏರ್‌ಪೋರ್ಟ್ ರಸ್ತೆ ಯೆಯ್ಯಡಿ, ಕಲ್ಲಾಪು-ತೊಕ್ಕೊಟ್ಟು ಉರ್ವಾ-ಚಿಲಿಂಬಿ ಹಾಗೂ ವಾಮಂಜೂರು ಸೈಂಟ್ ಜೋಸೆಫ್ ಕಾಲೇಜ್ ಬಳಿ ಇರುವ ವಿ.ಕೆ. ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಮಳಿಗೆಗಳಿಗೆ ಭೇಟಿ ನೀಡಬಹುದಾಗಿದೆ.