ಆ.13ರಂದು ವಿಕೆ ಫರ್ನಿಚರ್‌ನಿಂದಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ

WhatsApp Image 2023-08-01 at 13.59.10 (1)
Published on

ಮಂಗಳೂರು : ಮಂಗಳೂರಿನ ಪ್ರಖ್ಯಾತ ಫರ್ನಿಚರ್ ಮಳಿಗೆ ವಿಕೆ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್ ಸಂಸ್ಥೆಯು 76ನೇ ಸ್ವಾತಂತ್ರೃ ದಿನಾಚರಣೆಯ ಅಂಗವಾಗಿ ಆ.13ರಂದು ಬೆಳಗ್ಗೆ 10.30 ರಿಂದ 12.30ರವರೆಗೆ 4 ರಿಂದ 7ವರ್ಷ ಮತ್ತು 8 ರಿಂದ 14 ವರ್ಷದ ಮಕ್ಕಳಿಗೆ 2 ಹಂತಗಳಲ್ಲಿ ಚಿತ್ರಕಲಾ ಸ್ಪರ್ಧೆ ನಡೆಸಲಿದೆ. ಸ್ಪರ್ಧೆಯು ಯೆಯ್ಯಡಿ, ತೊಕ್ಕೊಟ್ಟು-ಕಲ್ಲಾಪು ಹಾಗೂ ವಾಮಂಜೂರಿನ ವಿ.ಕೆ.ಫರ್ನಿಚರ್ ಮಳಿಗೆಗಳಲ್ಲಿ ನಡೆಯಲಿದೆ. ಆ.12ರಂದು ಸಾಯಂಕಾಲ 5ರವರೆಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ನೋಂದಣಿ ಉಚಿತ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಿ.ಕೆ.ಫರ್ನಿಚರ್ ಶಾಖೆಗೆ ಭೇಟಿ ನೀಡುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net