ರಾಷ್ಟ್ರೀಯ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಗೆ ಅಭಿಜಿತ ಜಾಧವ ಆಯ್ಕೆ

Uttarakhand, National Junior Kabaddi Tournament, Golasangi, Abhijita Jadhav, Haridwar, Karnataka, Amrita Yadav,
ಅಭಿಜಿತ ಜಾಧವ
Published on

ಗೊಳಸಂಗಿ: ಉತ್ತರಾಖಂಡದ ಹರಿದ್ವಾರದಲ್ಲಿ ಜ.8 ರಿಂದ 11 ರವರೆಗೆ 19 ವರ್ಷದೊಳಗಿನ ವಯೋಮಿತಿಯ ರಾಷ್ಟ್ರೀಯ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಗೆ ಗೊಳಸಂಗಿಯ ಅಭಿಜಿತ ಅಣ್ಣಾರಾವ್ ಜಾಧವ (19) ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ. ಅಭಿಜಿತ್ ಜಾಧವ ರಾಷ್ಟ್ರೀಯ ಜ್ಯೂನಿಯರ್ ಕಬಡ್ಡಿ ಪಂದ್ಯಾವಳಿಗೆ ವಿಜಯಪುರ ಜಿಲ್ಲೆಯಿಂದ ಆಯ್ಕೆಗೊಂಡಿರುವ ಮೊಟ್ಟ ಮೊದಲಿಗ ಎಂಬುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ತಾಪಂ ಮಾಜಿ ಸದಸ್ಯ ಅಮೃತ ಯಾದವ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net