ಕಾರವಾರ ನೌಕಾನೆಲೆಗೆ ಐಜಿಬಿಸಿ ಗೋಲ್ಡ್ ರೇಟಿಂಗ್

Navy
ನೌಕಾ ಸೇನೆಯ ವಿವಿಧ ಕಾಮಗಾರಿಗಳನ್ನು ಸಿಡಿಎಸ್‌ ಉದ್ಘಾಟಿಸಿದರು.
Published on: 

ಕಾರವಾರ: ಇಲ್ಲಿನ ಕದಂಬ ನೌಕಾನೆಲೆ ಎರಡನೇ ಹಂತದ ವಿಸ್ತರಣೆ ಕಾಮಗಾರಿ ಮುಕ್ತಾಯವಾಗುವ ಹೊತ್ತಿಗೆ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಐಜಿಬಿಸಿ)ಗೋಲ್ಡ್ ರೇಟಿಂಗ್ ಪಡೆಯಲಿದೆ ಎಂದು ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಎನ್.ಎಸ್.ರಾಜಸುಬ್ರಹ್ಮಣಿ ಹೇಳಿದರು.

ಇಲ್ಲಿನ ಕದಂಬ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿಯ ಕೆಲವು ಕಾಮಗಾರಿಗಳನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ನೌಕಾನೆಲೆಯನ್ನು ನೈಸರ್ಗಿಕ ಗುಣಮಟ್ಟದಂತೆ ಸಿದ್ಧ ಮಾಡಲಾಗಿದೆ. ಶೇ.90 ರಷ್ಟು ಭಾರತೀಯ ತಂತ್ರಜ್ಞಾನದAತೆ ಸಿದ್ಧ ಮಾಡಲಾಗಿದೆ ಎಂದರು.

ಪ್ರೊಜೆಕ್ಟ್ ಸೀಬರ್ಡ್ನ ಡೈರೆಕ್ಟರ್ ಜನರಲ್ ವೈಸ್ ಅಡ್ಮಿರಲ್ ವಿವೇಕ ದಹಿಯಾ, ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ಇತರರು ಇದ್ದರು.

ಸೇಲರ್‌ಗಳಿಗೆ 60, ನೌಕಾ ಸಿವಿಲಿಯನ್‌ಗಳಿಗಾಗಿ 60, ಡಿಫೆನ್ಸ್ ಸೆಕ್ಯುರಿಟಿ ಪೊಲೀಸ್‌ಗಳ ವಸತಿಗೆ 156 ಮನೆಗಳನ್ನು ಈ ಸಂದರ್ಭದಲ್ಲಿ ಸಿಡಿಎಸ್ ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net