ಇಸ್ಟ್‌ ಜನ್ರಿಗೆ ಸಿಗತ್ತೆ ರೇಶನ್‌ ಎಣ್ಣೆ !!

ಗ್ಯಾಸ್‌ ಇಲ್ಲದವರಿಗೆ 3 , ವಿಲ್ಲಿಂಗ್‌ನೆಸ್‌ನವರಿಗೆ 2 ಲೀಟರ್‌ ಪೂರೈಕೆ
kerosene
ಸಾಂದರ್ಭಿಕ ಚಿತ್ರ kerosene
Published on

ಕಾರವಾರ: ಜಿಲ್ಲೆಯಲ್ಲಿ ನಿಯಮಿತ ಪಡಿತರ ಚೀಟಿದಾರರಿಗೆ ಸಬ್ಸಿಡಿ ದರದಲ್ಲಿ ಸೀಮೆ ಎಣ್ಣೆಯನ್ನು ನೀಡಲಾಗುತ್ತದೆ ಎಂದು ಆಹಾರ ಇಲಾಖೆ ತಿಳಿಸಿದೆ.

ಜಿಲ್ಲೆಯಲ್ಲಿನ ಗ್ರಾಮಾಂತರ ಪ್ರದೇಶದ ಅನಿಲ ರಹಿತ (ಗ್ಯಾಸ್‌ ಸಿಲಿಂಡರ್‌ ಇಲ್ಲದ) ಪಡಿತರ ಚೀಟಿದಾರರಿಗೆ 3 ಲೀಟರ್ ಹಾಗೂ ಗ್ರಾಮಾಂತರ ಪ್ರದೇಶದ ಒಪ್ಪಿಗೆ ನೀಡಿರುವ (ಆಹಾರ ಇಲಾಖೆ ವೆಬ್‌ಸೈಟ್‌ನಲ್ಲಿ ವಿಲ್ಲಿಂಗ್‌ನೆಸ್‌ ನೋಂದಣಿ ಮಾಡಿರುವ) ಅನಿಲ ಪಡಿತರ ಚೀಟಿಗಳಿಗೆ ತಲಾ 2 ಲೀಟರ್‌ನಂತೆ ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 372 ಕೆಎಲ್ ಸೀಮೆಎಣ್ಣೆಯನ್ನು ಹಂಚಿಕೆ ನೀಡಲಾಗಿದ್ದು, ಜಿಲ್ಲೆಯಲ್ಲಿನ 639 ಅನಿಲ ರಹಿತ ಪಡಿತರ ಕಾರ್ಡುಗಳಿಗೆ 3 ಲೀಟರ್‌ನಂತೆ ಮತ್ತು ಗ್ರಾಮಾಂತರ ಪ್ರದೇಶದ ಒಪ್ಪಿಗೆ ನೀಡಿರುವ 1,89,054 ಅನಿಲ ಪಡಿತರ ಚೀಟಿಗಳಿಗೆ ಪ್ರತಿ ಕಾರ್ಡಿಗೆ 2 ಲೀಟರಿನಂತೆ ತಾಲೂಕುವಾರು ಮರು ಹಂಚಿಕೆ ನೀಡಲಾಗಿದೆ.

ಅರ್ಹ ಪಡಿತರ ಚೀಟಿದಾರರು ಸೀಮೆ ಎಣ್ಣೆ ಪಡೆದುಕೊಳ್ಳಬೇಕು. ಒಂದಾನುವೇಳೆ ಪಡಿತರ ಚೀಟಿದಾರರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಕಡಿಮೆ ಪ್ರಮಾಣ ನೀಡುತ್ತಿದ್ದಲ್ಲಿ ಅಥವಾ ಪ್ರತಿ ಲೀಟರ್‌ಗೆ 35 ರೂ. ಕ್ಕಿಂತ ಹೆಚ್ಚಿಗೆ ದರವನ್ನು ಪಡೆಯುತ್ತಿದ್ದಲ್ಲಿ ಆಹಾರ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 1967 ನೇದಕ್ಕೆ ದೂರು ಸಲ್ಲಿಸಬಹುದಾಗಿದೆ.

ಅಥವಾ ತಮ್ಮ ತಾಲೂಕಿನ ಆಹಾರ ಶಿರಸ್ತೇದಾರ/ಆಹಾರ ನಿರೀಕ್ಷಕರರು ಅಥವಾ ಉಪನಿರ್ದೇಶಕರು ಆಹಾರ ನಾಗರಿಕ ಸರಬರಾಜು ಇಲಾಖೆ ಕಾರವಾರ ರವರನ್ನು ಸಂಪರ್ಕಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net