ಕಾಡು ಪ್ರಾಣಿ ಕೊಂದವರು ಕಬ್ಬಿಣ ಸರಳುಗಳ ಹಿಂದೆ ಬಂಧಿ

ಕಾಡು ಪ್ರಾಣಿ ಕೊಂದವರನ್ನು ಅರಣ್ಯಾಧಿಕಾರಿಗಳು ಬಂಧಿಸಿದರು.
ಕಾಡು ಪ್ರಾಣಿ ಕೊಂದವರನ್ನು ಅರಣ್ಯಾಧಿಕಾರಿಗಳು ಬಂಧಿಸಿದರು.
Published on
ಮುಂಡಗೋಡ:ತಾಲೂಕಿನ ಬಾಳೆಕೊಪ್ಪ ಕರಕಲಜಡ್ಡಿ ಸನಿಹ ಜಿಂಕೆ ಚರ್ಮ ದಾಸ್ತಾನು ಹಾಗೂ ಎರಡು ಬೈಕ್ ಗಳಲ್ಲಿ ಕಾಡುಹಂದಿ ಮಾಂಸ ಸಾಗಾಟ ಮಾಡುತಿದ್ದ ಐದು ಜನರನ್ನು ಬಂಧಿಸಿದ ಘಟನೆ ಭಾನುವಾರ ಸಂಜೆ ಜರುಗಿದೆ.
ತಾಲೂಕಿನ ಬಾಳೆಕೊಪ್ಪ ಗ್ರಾಮದ ಕನಕಪ್ಪ ದುರ್ಗಪ್ಪ ಮಾದರ,ಪರಶುರಾಮ ಕನಕಪ್ಪ ಮಾದರ, ಹಾಗೂ ಸೊರಬ ತಾಲೂಕಿನ ಕೊಡಿಕೊಪ್ಪ ಗ್ರಾಮದ ಸುರೇಶ ಬಿನ್ ದೇವಪ್ಪ, ಶಿವಪುತ್ರಪ್ಪ ಬಿನ್ ಹನುಮಂತಪ್ಪ, ಉಮೇಶ ಬಿನ್ ಗುಡ್ಡಪ್ಪ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿತರು ಬಾಳೆಕೊಪ್ಪ ಕರಕಲಜಡ್ಡಿ ಬಳಿ ಜಿಂಕೆಯ ಚರ್ಮವನ್ನು ದಾಸ್ತಾನು ಮಾಡಿದ್ದು ಹಾಗೂ ಎರಡು ಬೈಕ್ ಮೇಲೆ ಐದುಜನರು ನಾಲ್ಕು ಕೆಜಿ. ಕಾಡು ಹಂದಿ ಮಾಂಸ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಕಾತುರ ವಲಯ ಅರಣ್ಯಾಧಿಕಾರಿ ಮಾರ್ಗದಶನದಲ್ಲಿ ವೀರೇಶ,
ಉಪ ವಲಯ ಅರಣ್ಯ ಅಧಿಕಾರಿ ಕಿರಣ ವಾರೀಕರ್, ಮಾಲತೇಶ ಮಾದರ, ಅರಣ್ಯ ರಕ್ಷಕ ಜಕ್ಕಪ್ಪ ಹಿರೇಕುರುಬರ, ವಿನಾಯಕ ಸುಂಕದ,ರಾಮಕೃಷ್ಣ ಮಕ್ಕೋಜಿ,ಮಂಜುನಾಥ ಕೆ. ವಿ., ಹಾಗೂ ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net