ಗಂಗೆಕೊಳ್ಳದಲ್ಲಿ ಸ್ವಯಂಪ್ರೇರಿತ ತೆರವು

ಗೋಕರ್ಣ ಬಳಿಯ ಗಂಗೆಕೊಳ್ಳ ಬೀಚ್‌ನಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಹೋಮ್-ಸ್ಟೇಗಳನ್ನು ಸ್ವಯಂಪ್ರೇರಿತವಾಗಿ ಮಾಲೀಕರು ತೆರವುಪಡಿಸಿದರು.
ಗೋಕರ್ಣ ಬಳಿಯ ಗಂಗೆಕೊಳ್ಳ ಬೀಚ್‌ನಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಹೋಮ್-ಸ್ಟೇಗಳನ್ನು ಸ್ವಯಂಪ್ರೇರಿತವಾಗಿ ಮಾಲೀಕರು ತೆರವುಪಡಿಸಿದರು.
Published on
ಗೋಕರ್ಣ: ನಾಡುಮಾಸ್ಕೇರಿ ಗ್ರಾಪಂನ ಗಂಗೆಕೊಳ್ಳ ಬೀಚ್‌ನಲ್ಲಿ ಕೂಡ ಸರ್ಕಾರಕ್ಕೆ ಸೇರಿದ ಹರಿದು ಬಂದ ಜಾಗದಲ್ಲಿ ಹೋಮ್-ಸ್ಟೇ ಮತ್ತು ರೆಸಾರ್ಟ್ ಕಟ್ಟಲಾಗಿತ್ತು. ಇಂತಹ ಎಲ್ಲ ಅನಧಿಕೃತ ಕಟ್ಟಡ ಮಾಲಿಕರಿಗೆ ಕೂಡ ತಹಸೀಲ್ದಾರ್ ಅವರು ನೋಟಿಸ್ ಜಾರಿ ಮಾಡಿದ್ದರು. ಆದರೆ, ಇಲ್ಲಿನ ಎಲ್ಲ 7 ಕಟ್ಟಡ ಮಾಲೀಕರು ಯಾವುದೇ ಕಾರ್ಯಾಚರಣೆಗೆ ಅವಕಾಶ ಒದಗಿಸದೇ ತಾವುಗಳೇ ತಮ್ಮ ಕಟ್ಟಡಗಳನ್ನು ಸೋಮವಾರ ಬೆಳಗ್ಗೆಯಿಂದ ತೆರವು ಮಾಡುವ ಮೂಲಕ ಜಾಗ ಖುಲ್ಲಾ ಪಡಿಸಿದರು. ಇದರ ಹೊರತಾಗಿ ಇಲ್ಲಿ ಮತ್ತು ಹೊಸಹಿತ್ತಲು ಭಾಗದಲ್ಲಿ ಹರಿದು ಬಂದ ಜಾಗದಲ್ಲಿ ಅನೇಕರು ತೋಟ ಮತ್ತು ತರಕಾರಿ ಕೃಷಿ ಮೂಲಕ ಹಲವು ಎಕರೆ ಪ್ರದೇಶಗಳನ್ನು ಅತಿಕ್ರಮಣಗೊಳಿಸಿಕೊಂಡಿದ್ದರು. ಅನಧಿಕೃತ ಕಟ್ಟಡಗಳೊಂದಿಗೆ ಈ ಎಲ್ಲ ಕೃಷಿ ಭೂಮಿಗಳನ್ನು ಕಾರ್ಯಾಚರಣೆ ಮೂಲಕ ಸಂಪೂರ್ಣ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net