ಪ್ರವಾಸೋದ್ಯಮಕ್ಕೆ ವಂದೇ ಭಾರತ್​ ಬಲ

ಗೋಕರ್ಣದಲ್ಲಿ ವಂದೇ ಭಾರತ್​ ರೈಲು ಸ್ವಾಗತಿಸಿದ ಶಾಸಕ ದಿನಕರ ಶೆಟ್ಟಿ
MLA Dinakar Shetty welcomed the Vande Bharat Express, which officially started its run between Madgaon and Bengaluru on Sunday, at Gokarna Road railway station.
ಗೋಕರ್ಣ ರೋಡ್​ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಮಡಗಾಂವ&ಬೆಂಗಳೂರು ಮಧ್ಯೆ ಅಧಿಕೃತ ಓಡಾಟ ಪ್ರಾರಂಭಿಸಿದ ವಂದೇ ಭಾರತ್​ ಎಕ್ಸ್​ಪ್ರೆಸ್​ಗೆ ಶಾಸಕ ದಿನಕರ ಶೆಟ್ಟಿ ಪುಷ್ಪಹಾರ ಹಾಕಿ ಸ್ವಾಗತಿಸಿದರು.
Published on: 

ಗೋಕರ್ಣ: ಉತ್ತಮ ಸಂಚಾರ ವ್ಯವಸ್ಥೆ ಪ್ರವಾಸಿ ಕೇಂದ್ರಗಳಿಗೆ ವರದಾನವಾಗಿದೆ. ಇದೇ ಉದ್ದೇಶದಿಂದ ಕೇಂದ್ರ ರೈಲ್ವೆ ಇಲಾಖೆ ಕರ್ನಾಟಕದ ಪಶ್ಚಿಮ ಕರಾವಳಿ ಮತ್ತು ಗೋವಾದ ಪ್ರವಾಸೋದ್ಯಮವನ್ನು ದೃಷ್ಟಿಯಲ್ಲಿಟ್ಟುಕೊಂಡು ನೂತನ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಓಡಾಟವನ್ನು ಶುಭಾರಂಭ ಮಾಡಿದೆ ಎಂದು ಶಾಸಕ ದಿನಕರ ಶೆಟ್ಟಿ ನುಡಿದರು.

ಭಾನುವಾರ ಮಡಗಾಂವ&ಬೆಂಗಳೂರು ನಡುವೆ ಅಧಿಕೃತ ಓಡಾಟ ಪ್ರಾರಂಭಿಸಿದ ವಂದೇ ಭಾರತ್​ ಎಕ್ಸ್​ಪ್ರೆಸ್​ನ್ನು ಇಲ್ಲಿನ ಮಾದನಗೇರಿಯ ಗೋಕರ್ಣ ರೋಡ್​ ನಿಲ್ದಾಣದಲ್ಲಿ ಪುಷ್ಪಹಾರ ಹಾಕಿ ಸ್ವಾಗತಿಸಿ ಮಾತನಾಡಿದರು.

ಪಶ್ಚಿಮ ಕರಾವಳಿ ರೈಲ್ವೆ ಸೇವಾ ಸಮಿತಿಯ ರಾಜೀವ ಗಾಂವಕರ ಮತ್ತಿತರರು ಈ ಭಾಗದ ರೈಲ್ವೆ ಸಂಪರ್ಕ ಹೆಚ್ಚಿಸುವ ಬಗ್ಗೆ ನಿರಂತರ ಪ್ರಯತ್ನ ನಡೆಸಿದಾಗ ಅವರಿಗೆ ಸಂರ್ಪೂಣ ಬೆಂಬಲ ನೀಡಿ ಅನೇಕ ಹೊಸ ರೈಲು ಓಡಾಟ ಪ್ರಾರಂಭಿಸಲು ಉತ್ತೇಜಿಸಲಾಯಿತು. ಇದರ ಪರಿಣಾಮವಾಗಿ ಇಂದು ಕರಾವಳಿ ಕರ್ನಾಟಕದಲ್ಲಿ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ ಜನರ ಸೇವೆಗೆ ಒದಗಿ ಬರುವಂತಾಗಿದೆ ಎಂದು ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.

ಇದೇ ವೇಳೆ ಈ ಭಾಗದ ರೈಲ್ವೆ ಸೇವೆ ಹೆಚ್ಚಿಸಲು ಪ್ರಯತ್ನಿಸಿದ ದಿ.ಮೋಹನ ಶೆಟ್ಟಿ, ದಿ.ಆರ್​.ಎಸ್​.ಭಾಗ್ವತ್​, ತರಂಗ ಸಂಸ್ಥೆಯ ಶ್ರೀಕಾಂತ ಭಟ್ಟ ಮತ್ತಿತರರನ್ನು ಶಾಸಕರು ಅಭಿನಂದಿಸಿದರು.

ವಂದೇ ಭಾರತ್​ ಪ್ರಾರಂಭಕ್ಕೆ ನಡೆಸಲಾದ ಸತತ ಎರಡು ವರ್ಷದ ಪ್ರಯತ್ನಗಳಿಗೆ ಬೆಂಗಾವಲಾಗಿ ನಿಂತು ಮಾರ್ಗದರ್ಶನವಿತ್ತು, ಸಂಸದರು ಮತ್ತು ಕೇಂದ್ರ ಸಚಿವರ ಮನವೊಲಿಸಲು ಸಹಾಯ ನೀಡಿದ ಶಾಸಕ ದಿನಕರ ಶೆಟ್ಟಿ ಅವರನ್ನು ಪಶ್ಚಿಮ ಕರಾವಳಿ ರೈಲ್ವೆ ಸೇವಾ ಸಮಿತಿ ವತಿಯಿಂದ ರಾಜೀವ ಗಾಂವಕರ ಮತ್ತಿತರರು ಸನ್ಮಾನಿಸಿದರು.

ಶ್ರೀಮಹಾಲಸಾ ಸಿದ್ಧಿವಿನಾಯಕ ಮಂದಿರದ ಧರ್ಮದಶಿರ್ ಸುನೀಲ್​ ಪೈ, ಬಿಜೆಪಿ ಮಂಡಲಾಧ್ಯಕ್ಷ ಗಣೇಶ ಪಂಡಿತ, ಶ್ರೀಮಹಾಬಲೇಶ್ವರ ಸಹಕಾರಿ ಬ್ಯಾಂಕ್​ ಅಧ್ಯಕ್ಷ ಮೋಹನ ನಾಯಕ, ಗುತ್ತಿಗೆದಾರ ಧೀರು ಶಾನಭಾಗ, ಬಿಜೆಪಿ ಪ್ರಮುಖರಾದ ಮಹೇಶ ಶೆಟ್ಟಿ, ಸಂದೀಪ ಅಗಸಾಲಿ, ಸಣ್ಣು ಗೌಡ, ರಾಮು ಕೆಂಚನ್​, ರಾಮೇಶ್ವರ ಕುರ್ಲೆ, ರಮೇಶ ಗೌಡ, ಶಂಕರ ಗೌಡ ಹೆಗ್ರೆ, ಪ್ರಭಾಕರ ಪ್ರಸಾದ, ಆನಂದು ನಾಯಕ, ಉಮೇಶ ಗಾಂವಕರ, ಚಂದ್ರಹಾಸ ನಾಯಕ, ವೆಂಕಟ್ರಮಣ ಆರ್​.ಕವರಿ, ಅನಿಲ್​ ಶೇಟ್​, ಪ್ರೇಮಾನಂದ ಗಾಂವಕರ ಮತ್ತಿತರರಿದ್ದರು.