ಜೈಲಿನಲ್ಲಿ ಮತ್ತೆ ಗಲಾಟೆ

ಕಾರವಾರ ಕಾರಾಗೃಹ
ಕಾರವಾರ ಕಾರಾಗೃಹ
Published on
ಕಾರವಾರ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಮತ್ತೆ ಗಲಾಟೆ ನಡೆದಿದೆ. ಜೈಲಿನಲ್ಲಿ ಮಂಗಳೂರು ಮೂಲದ ನಾಲ್ವರು ಮಾದಕ ವಸ್ತುವಿಗಾಗಿ ಆಗ್ರಹಿಸಿ, ಮತ್ತೆ ಜೈಲಿನಲ್ಲಿದ್ದ ಟಿ.ವಿ.ಸೇರಿ ಹಲವು ವಸ್ತುಗಳನ್ನು ಪುಡಿಗಟ್ಟಿದ್ದಾರೆ. ಜೈಲು ಸಿಬ್ಬಂದಿಯಿಂದ ಗಲಾಟೆ ನಿಯಂತ್ರಿಸಲು ಸಾಧ್ಯವಾಗದ ಕಾರಣ ಶಹರ ಠಾಣೆ ಪೊಲೀಸರು ಧಾವಿಸಿದ್ದಾರೆ.
ಬಿಸ್ಕೆಟ್ ಪ್ಯಾಕೆಟ್ ಮೂಲಕ ಮಾದಕ ವಸ್ತುವನ್ನು ಜೈಲಿನೊಳಗೆ ತರಲು ಕೈದಿಗಳು ಸಂಚು ರೂಪಿಸಿದ್ದರು ಎನ್ನಲಾಗಿದೆ. ಆದರೆ, ಜೈಲು ಅಧಿಕಾರಿಗಳ ಪರಿಶೀಲನೆ ನಡೆಸಿ, ಮಾದಕ ವಸ್ತುವನ್ನು ನೀಡಿರಲಿಲ್ಲ‌. ಇದರಿಂದ ರೊಚ್ಚಿಗೆದ್ದ ಕೈದಿಗಳು ಗಲಾಟೆ ಮಾಡಿದ್ದಾರೆ.
ಎರಡು ದಿನದ ಹಿಂದೆ ಜೈಲಿನಲ್ಲಿ ಗಲಾಟೆ ನಡೆದಿತ್ತು. ಜೈಲರ್ ಹಾಗೂ ಸಿಬ್ಬಂದಿ ಮೆಲೆ ಮಂಗಳೂರು ಮೂಲದ ಇಬ್ಬರು ಕೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಸಿಬ್ಬಂದಿ ಗುಣಮುಖರಾಗಿ ಮರಳುವ ಮುನ್ಮವೇ ಮತ್ತೆ ಗಲಾಟೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net