ಹಳಿಯಾಳದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಯುಗಾದಿ (Ugadi) ಹೊಸ ವರ್ಷ ಸಮಾರಂಭವನ್ನು ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಉದ್ಘಾಟಿಸಿದರು. ಬ್ರಹ್ಮಕುಮಾರಿ ಡಾ. ಪದ್ಮಕ್ಕ ಇದ್ದರು.
Published on:
Copied
Follow Us
ಹಳಿಯಾಳ: ಕ್ಯಾಲೆಂಡರ್ ಪ್ರಕಾರ ಜನವರಿ ಹೊಸ ವರ್ಷ ಇರಬಹುದು. ಆದರೆ, ಭಾರತದ ಸನಾನತ ಸಂಸ್ಕೃತಿಯ ಪ್ರಕಾರ ಯುಗಾದಿಯೇ (Ugadi ) ನಮಗೆಲ್ಲ ಹೊಸ ವರ್ಷವಾಗಿದೆ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಭವಾನಿ ಪೀಠದ ಮರಾಠಾ ಜಗದ್ಗುರು ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದರು.
ಪಟ್ಟಣದಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರ ನಡೆ, ನುಡಿ ಧರ್ಮಶಾಸ್ತ್ರದಂತೆ ಇರಬೇಕು. ಉಪಕಾರ ಮತ್ತು ಪರೋಪಕಾರದಂತ ಮಾನವೀಯ ಗುಣಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಮನೆಯಲ್ಲಿ ಉತ್ತಮ ಗುಣಗಳ ಜೊತೆಗೆ ಸಂಸ್ಕಾರಗಳನ್ನು ಕಲಿಸಲು ಮುಂದಾದರೆ ಮಾತ್ರ ಅವರು ಮುಂದಿನ ದಿನಗಳಲ್ಲಿ ದೇಶದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ರಾಜಯೋಗಿನಿ ಬ್ರಹ್ಮಕುಮಾರಿ ಡಾ. ಪದ್ಮಕ್ಕ ಮಾತನಾಡಿ, ಮನಸಿಗೆ ಶಾಂತಿ ಸಿಗಬೇಕಾದರೆ ಎಲ್ಲರ ಅಭಿವೃದ್ಧಿಯನ್ನು ಬಯಸಬೇಕು. ಶಾಂತಿ ಮತ್ತು ನೆಮ್ಮದಿಯ ಜೀವನವು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗಿದೆ ಎಂದರು.