ದಾಂಡೇಲಿ- ಅಳ್ನಾವರ-ಧಾರವಾಡ ನಡುವೆ 1800 ರಲ್ಲೇ ರೈಲ್ವೆ ಹಳಿ ಇತ್ತು. ದಾಂಡೇಲಿಯಿಂದ ಮರದ ದಿಮ್ಮಿಗಳನ್ನು ಸಾಗಿಸಲು ಬ್ರಿಟಿಷರು ರೈಲ್ವೆ ಹಳಿ ಹಾಕಿದ್ದರು. ಆದರೆ, ಆಗ ನ್ಯಾರೋ ಗೇಜ್ ಆಗಿತ್ತು. ಇದರಿಂದ ಸ್ವಾತಂತ್ರಾ ನಂತರ ಕೆಲ ವರ್ಷ ರೈಲು ಓಡಾಟ ಬಂದ್ ಆಗಿತ್ತು. ನಂತರ ನ್ಯಾರೋ ಗೇಜ್ ಹಳಿಯನ್ನು ಬ್ರಾಡ್ ಗೇಜ್ ಗೆ ಬದಲಾಯಿಸಲಾಯಿತು. ಆದರೂ ಗೂಡ್ಸ್ ರೈಲು ಬಂತೇ ಹೊರತು ಪ್ರಯಾಣಿಕರ ರೈಲು ಬಂದಿರಲಿಲ್ಲ. 2020 ರಲ್ಲಿ ಆಗ ರೈಲ್ವೆ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಧಾರವಾಡ-ದಾಂಡೇಲಿ ನಡುವೆ ಪ್ರಯಾಣಿಕರ ರೈಲು ಸೇವೆ ಪ್ರಾರಂಭಿಸಿದ್ದರು. ಆದರೆ, ಕೋವಿಡ್ ಕಾರಣ ಮತ್ತೆ ಪ್ರಯಾಣಿಕರ ರೈಲು ಮತ್ತೆ ಬಂದ್ ಆಗಿತ್ತು. ಈ ನಡುವೆ ಮಾರ್ಗ ವಿದ್ಯುದೀಕರಣವೂ ಪೂರ್ಣಗೊಂಡಿದೆ. ಆದರೆ, ಮೆಮು ಬದಲು ಡೆಮು ರೈಲು ನೀಡಲಾಗಿದೆ.