ಕಳೆಗಟ್ಟಿದ ಸಾಂಪ್ರದಾಯಿಕ ದೀಪಾವಳಿ ಸಂಭ್ರಮ

ಕಚೇರಿ, ಮನೆಗಳಲ್ಲಿ ವೈಭವಯುತವಾಗಿ ಶ್ರೀ ಲಕ್ಷ್ಮೀ ಪೂಜೆ
A pavilion made of ash made from agricultural produce on the road to Valagalli in Kumta.
ಕುಮಟಾದ ವಾಲಗಳ್ಳಿಯ ರಸ್ತೆಯಲ್ಲಿ ಕೃಷಿ ಉತ್ಪನ್ನಗಳಿಂದ ಕಟ್ಟಿರುವ ಬೂದೆಗಳವಿನ ಮಂಟಪ.
Published on: 

ಕುಮಟಾ: ದುಷ್ಟಶಕ್ತಿಯ ಸಂಹಾರ, ಸತ್ಯ ಮತ್ತು ಧರ್ಮದ ವಿಜಯದ ಸಂಕೇತ ಹಾಗೂ ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸುವ ಪವಿತ್ರ ಕಾತಿರ್ಕ ಮಾಸದ ದೀಪಾವಳಿ ಹಬ್ಬವನ್ನು ತಾಲೂಕಿನಾದ್ಯಂತ ಅತ್ಯಂತ ಸಡಗರ, ಸಂಭ್ರಮ ಹಾಗೂ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಹಬ್ಬದ ವಿಶೇಷ ಕಳೆ ಮನೆಮನೆಗಳಲ್ಲೂ ಎದ್ದು ಕಾಣುತ್ತಿತ್ತು.

ಕಾತಿರ್ಕ ತ್ರಯೋದಶಿಯಿಂದ ಆರಂಭಗೊಂಡು ಮೂರ್ನಾಲ್ಕು ದಿನಗಳ ಕಾಲ ನಡೆದ ಬೆಳಕಿನ ಉತ್ಸವದಲ್ಲಿ ವಿವಿಧ ಪಾರಂಪರಿಕ ವಿಧಿವಿಧಾನಗಳು ನೆರವೇರಿದವು. ಮೊದಲ ದಿನ ನೀರು ತುಂಬಿಸುವ ಹಬ್ಬ, ಬಳಿಕ ತೈಲಾಭ್ಯಂಗ ಸ್ನಾನ ಆಚರಣೆಯಡಿ ನರಕ ಚತುರ್ದಶಿಯ ಮುಂಜಾನೆ ಸೂಯೋರ್ದಯಕ್ಕೂ ಮುನ್ನ ಮನೆಮನೆಗಳಲ್ಲಿ ಗಂಗಾ ಪೂಜೆ ಮಾಡಿ, ತೈಲವನ್ನು ಹಚ್ಚಿ ಸಾಂಪ್ರದಾಯಿಕ ಅಭ್ಯಂಗ ಸ್ನಾನ ಮಾಡಲಾಯಿತು.

ಈ ಬಾರಿ ಭಾನುವಾರ ಅಮಾವಾಸ್ಯೆಯ ತಿಥಿ ಅನ್ವಯಿಸಿ ಸಂಜೆ ಸುಮುಹೂರ್ತದಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಕಚೇರಿ ಮತ್ತು ಮನೆಗಳಲ್ಲಿ ಧನಲಕ್ಷ್ಮೀ ಪೂಜೆಯನ್ನು ವೈಭವದಿಂದ ನೆರವೇರಿಸಿದರು. ಮಾರುಕಟ್ಟೆಗಳು ಹೂವು, ಹಣ್ಣು ಮತ್ತು ಅಲಂಕಾರಿಕ ವಸ್ತುಗಳಿಂದ ಕಂಗೊಳಿಸುತ್ತಿದ್ದವು. ಜತೆಗೆ ಸೋಮವಾರ ಬೆಳಗ್ಗೆ ಹಲವೆಡೆ ಲಕ್ಷ್ಮೀ ಪೂಜೆ, ಗೋಪೂಜೆ ನೆರವೇರಿತು.

ಪ್ರತಿಯೊಂದು ಮನೆಯ ಮುಂಭಾಗದಲ್ಲಿ ಮಣ್ಣಿನ ಹಣತೆಗಳು, ಮೇಣದ ಬತ್ತಿಗಳು, ಬಣ್ಣಬಣ್ಣದ ಆಕಾಶಬುಟ್ಟಿಗಳು, ವಿದ್ಯುದ್ದೀಪಾಲಂಕಾರ ಮತ್ತು ಎಲ್​ಇಡಿ ದೀಪಗಳ ಬೆಳಕು ಜಮಗಿಸುತ್ತಿತ್ತು. ಪಟ್ಟಣದ ಪ್ರಮುಖ ವಾಣಿಜ್ಯ ಕಟ್ಟಡಗಳು ಹಾಗೂ ಮನೆಗಳು ಕಟ್ಟಡಗಳನ್ನು ವಿದ್ಯುತ್​ ದೀಪಗಳಿಂದ ನವವಧುವಿನಂತೆ ಅಲಂಕರಿಸಲಾಗಿತ್ತು. ಸಾರ್ವಜನಿಕರಲ್ಲಿ ಪರಿಸರ ಜಾಗೃತಿಯೂ ಹೆಚ್ಚಿದ್ದು, ಎಲ್ಲೆಡೆ ಹಸಿರು ಪಟಾಕಿಗಳನ್ನು ಬಳಸುವ ಮೂಲಕ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ನಿಯಂತ್ರಿಸಲು ಸಾರ್ವಜನಿಕರ ಸಹಯೋಗ ಗಮನ ಸೆಳೆದಿದೆ.

ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ ಭಾರಿ ಜನದಟ್ಟಣೆ ಮುಂದುವರೆದಿದೆ. ಜನರು ಹೊಸ ಬಟ್ಟೆ ಧರಿಸಿ, ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಿಗೆ ಭೇಟಿ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಇದು ಸಾಮಾಜಿಕ ಸೌಹಾರ್ದ ಮತ್ತು ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿತು. ಒಟ್ಟಾರೆ ದೀಪಾವಳಿ ಹಬ್ಬ ಜನರ ಮನಸಿನಲ್ಲಿ ಹೊಸ ಭರವಸೆ, ಉತ್ಸಾಹ ಮತ್ತು ನೆಮ್ಮದಿಯನ್ನು ಮೂಡಿಸುವ ಮೂಲಕ ಅತ್ಯಂತ ಯಶಸ್ವಿಯಾಗಿ ನಡೆದಿದೆ.

ಸಾಂಪ್ರದಾಯಿಕ ಆಟಗಳ ಸಂಭ್ರಮ

ತಾಲೂಕಿನ ವಾಲಗಳ್ಳಿಯಲ್ಲಿ ಹಾಲಕ್ಕಿ ಸಮಾಜದವರು ಬೂದೆಗಳವಿನ ಆಚರಣೆಯನ್ನು ಅತ್ಯಂತ ಸಾಂಪ್ರದಾಯಿಕ ಶ್ರದ್ಧೆಯಿಂದ ಆಚರಿಸಿದ್ದಾರೆ. ವಾಲಗಳ್ಳಿಯ ಅಂಗಡಿ ಸಾಲಿನಲ್ಲಿ ಗ್ರಾಮಸ್ಥರಿಂದ ಸಂಗ್ರಹಿಸಿದ ಕೃಷಿ ಉತ್ಪನ್ನಗಳನ್ನು ಬಳಸಿ ಬೃಹತ್​ ಮಂಟಪ ಸಿದ್ಧಪಡಿಸಿ, ಪೂಜೆ ಸರ್ಮಪಿಸಿದರು. ಹಬ್ಬದ ಕೊನೆಯಲ್ಲಿ ಬೂದೆ ಮಂಟಪ ವಿಸಜಿರ್ಸಿ ಹರಾಜು ಹಾಕಲಾಗುತ್ತದೆ. ಇದೇ ರೀತಿ ಪಟ್ಟಣದ ಗ್ರಾಮದೇವಿಗೆ ಪೂಜೆ ಸಲ್ಲಿಸಿದ ಕೋಮಾರಪಂಥ, ಹಾಲಕ್ಕಿ ಹಾಗೂ ನಾಮಧಾರಿ ಸಮಾಜದವರು ಹೊಂಡೆಯಾಟದ ಸಂಪ್ರದಾಯವನ್ನು ಪ್ರಮುಖ ಸ್ಥಳಗಳಲ್ಲಿ ಪ್ರದಶಿರ್ಸಿದ್ದಾರೆ. ಅಂತೆಯೇ ಸೂಲಗಾಯಿ ಆಟವನ್ನೂ ಗ್ರಾಮೀಣ ಭಾಗಗಳಲ್ಲಿ ಯುವಜನತೆ ಹಿರಿಯರೊಡಗೂಡಿ ಆಟವಾಡಿ ಸಂಭ್ರಮಿಸಿದ್ದಾರೆ.