ಟಿಎಚ್‌ಒ ಡಾ. ಸನಾ, ನೋಡಲ್ ಅಧಿಕಾರಿ, ಆಯುಷ್ ಅಧಿಕಾರಿ ಡಾ. ಕುಮಾರ ಮೊಗೇರ, ಎಫ್‌ಡಿಎ ವೆಂಕಟೆಶ ನಾಯ್ಕ, ಆರೋಗ್ಯ ಶಿಕ್ಷಣಾಧಿಕಾರಿ ಶ್ರೀನಿವಾಸ, ಹಿರಿಯ ಆರೋಗ್ಯ ಅಧಿಕಾರಿ ರಾಮಪ್ಪ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಮಂಜುನಾಥ ಹಾಗೂ ಇತರ ಆರೋಗ್ಯ ಇಲಾಖಾ ಸಿಬ್ಬಂದಿ ಪಟ್ಟಣದಲ್ಲಿ 4 ಹಾಗೂ ಶಿರಾಲಿಯ ಕ್ಲಿನಿಕ್ ಒಂದರ ಮೇಲೆ ದಾಳಿ ನಡೆಸಿ ಪರಿಶೀಲಿಸಿತು. ಆಯಾ ಕ್ಲಿನಿಕ್‌ಗಳ ವೈದ್ಯರು ಹೊಂದಿರುವ ಎಂಬಿಬಿಎಸ್, ಬಿಎಎಂಎಸ್, ಬಿಎಚ್‌ಎಂಎಸ್ ಹಾಗೂ ಯುನಾನಿ ಪದವಿ ಪ್ರಮಾಣಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಕ್ಲಿನಿಕ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ವಹಿಸಲಾಗಿದೆ. ಒಟ್ಟು 3 ಕ್ಲಿನಿಕ್‌ಗಳನ್ನು ಸೀಜ್ ಮಾಡಲಾಗಿದ್ದು, ಮದಿನಾ ಕಾಲನಿಯ ಕ್ಲಿನಿಕ್ ಮಾಲೀಕರು ತಾವೆ ಖುದ್ದಾಗಿ ಬಂದ್ ಮಾಡಿದ್ದು ಅವರ ಬಾಗಿಲಿಗೆ ನೋಟಿಸ್ ಅಂಟಿಸಲಾಗಿದೆ. ಕ್ಲಿನಿಕ್‌ಗಳ ವಿರುದ್ಧದ ಮಾಹಿತಿಯನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ರವಾನಿಸಲಾಗಿದ್ದು, ಸಮಗ್ರ ತನಿಖೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಟಿಎಚ್‌ಒ ಅವರು ತಿಳಿಸಿದ್ದಾರೆ.