ganja ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ

ವಶಪಡಿಸಿಕೊಂಡ ಗಾಂಜಾದೊಂದಿಗೆ ganja ಪೊಲೀಸರು.
ವಶಪಡಿಸಿಕೊಂಡ ಗಾಂಜಾದೊಂದಿಗೆ ganja ಪೊಲೀಸರು.
Published on
ಕುಮಟಾ: ಗಾಂಜಾ ganja ಸಾಗಿಸುತ್ತಿದ್ದ ಮೂವರನ್ನು ಪಟ್ಟಣದ ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಮೂರೂರು ಗುಡ್ಡದ ಕಾಗಾಲ ಮಾನೀರ ಬಳಿ ನಡೆದಿದೆ.
ತಾಲೂಕಿನ ದೀವಳ್ಳಿ ಸಾಂತಗಲ್‌ದ ಪ್ರಾಂಕ್ಲಿನ್ ಅಂಬ್ರೋಜ್ ಡಿಸೋಜಾ (21), ಶಿರಸಿ ತಾಲೂಕಿನ ಅರೆಕೊಪ್ಪದ ನಿಖಿಲ ಪರಶುರಾಮ ಸಾವಂತ (26), ಶಿರಸಿ ಅರೆಕೊಪ್ಪದ ಮಧುಕೇಶ್ವರ ಜೈ ಬಾದೂರ ಕಾರ್ಗಿ (29) ಬಂಧಿತರು.
ಮೂರೂರು ಗುಡ್ಡದ ಕಾಗಾಲ ಮಾನೀರ ಬಳಿಯಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳೊಟ್ಟಿಗೆ 1 ಲಕ್ಷ ರೂ. ಮೌಲ್ಯದ 3 ಕೆಜಿ ಗಾಂಜಾ ಹಾಗೂ ಮಾರಾಟಕ್ಕೆ ಬಳಸುತ್ತಿದ್ದ ಸ್ಕೂಟಿ, 2 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net