ಶ್ರೀಗಂಧದ ಮರ ಕಡಿದೊಯ್ದ ಕಳ್ಳರು

ಮುಂಡಗೋಡ ಶ್ರೀಗಂಧದ ಮರ ಕಳ್ಳತನವಾಗಿರುವುದು.
ಮುಂಡಗೋಡ ಶ್ರೀಗಂಧದ ಮರ ಕಳ್ಳತನವಾಗಿರುವುದು.
Published on
ಮುಂಡಗೋಡ: ತಾಲೂಕಿನ ಇಂದಿರಾನಗರದ ನೀರಾವರಿ ಇಲಾಖೆಯ ಕಾಲುವೆ ಬಳಿ ಇರುವ ಬೆಲೆಬಾಳುವ ಶ್ರೀಗಂಧದ ಮರವನ್ನು ಮರಗಳ್ಳರು ಕಡಿದುಕೊಂಡ ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೂರು ದಿನಗಳ ಹಿಂದೆಯೇ ಶ್ರೀಗಂಧದ ಮರವನ್ನು ಕಡಿಯಲಾಗಿದೆ ಎಂದು ತಿಳಿದು ಬಂದಿದ್ದು ಕಡಿದ ಶ್ರೀಗಂಧದ ಮರದ ಬುಡಚಿಯು ಸಾರ್ವಜನಿಕರ ಗಮನಕ್ಕೆ ಬಂದಿದೆ. ಮರಗಳ್ಳರು ಶ್ರೀಗಂಧದ ಮರವನ್ನು ಕಡಿದು ಟೊಂಗೆಗಳನ್ನು ಬುಡಚಿಯ ಪಕ್ಕದಲ್ಲಿಯೇ ಎಸೆದು ಹೋಗಿದ್ದು ಮರಗಳ್ಳರ ಪತ್ತೆಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net