ಪೌರ ಕಾರ್ಮಿಕರ ಗೃಹ ಭಾಗ್ಯಕ್ಕೆ ಅನ್ಯರ ಅಡ್ಡಗಾಲು

ಪೌರ ಕಾರ್ಮಿಕರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲು ಆಗಮಿಸಿದ್ದರು.
ಪೌರ ಕಾರ್ಮಿಕರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲು ಆಗಮಿಸಿದ್ದರು.
Published on
ಕಾರವಾರ:
ಗೃಹ ಭಾಗ್ಯ ಯೋಜನೆಯ ಮನೆಗಳನ್ನು ಶೀಘ್ರ ನಿರ್ಮಾಣ ಮಾಡಿಕೊಡುವಂತೆ ಪೌರ ಕಾರ್ಮಿಕರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಕಾರವಾರದಲ್ಲಿ ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಲ್ಲಿ ಕೋಡಿಬಾಗ ಪಂಚರಾಶಿವಾಡದಲ್ಲಿ 16 ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಗಾಂಧಿನಗರದಲ್ಲಿ 8 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. 42 ಕಾಯಂ ಪೌರ ಕಾರ್ಮಿಕರ ಪೈಕಿ 8 ಜನರಿಗೆ ಅಲ್ಲಿ ಮನೆ ಶೀಘ್ರದಲ್ಲಿ ಸಿಗಲಿದೆ. ಉಳಿದ 34 ಜನರಿಗೆ ಮನೆ ನಿರ್ಮಾಣಕ್ಕೆ ಜಾಗದ ಕೊರತೆ ಇದ್ದು, ಹಾಲಿ ಗಾಂಽ ನಗರದಲ್ಲಿ ಪೌರ ಕಾರ್ಮಿಕರು ಮನೆಗಳನ್ನು ತೆರವು ಮಾಡಿ ಕೊಟ್ಟಿದ್ದಾರೆ.
ಆದರೆ, ನಗರಸಭೆ ಪೌರ ಕಾರ್ಮಿಕರದಲ್ಲದ ಏಳೆಂಟು ಕುಟುಂಬಗಳು ಅಲ್ಲಿ ವಾಸವಿದ್ದು, ಮನೆಗಳನ್ನು ತೆರವು ಮಾಡುತ್ತಿಲ್ಲ. ಇದರಿಂದ ಗೃಹ ಭಾಗ್ಯ ಯೋಜನೆಗೆ ಹಿನ್ನಡೆಯಾಗಿದೆ. ಶೀಘ್ರದಲ್ಲಿ ತೆರವು ಮಾಡಿಸಿ, ಗೃಹ ಭಾಗ್ಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು. ಮಂಜುನಾಥ ಶಿರಸಿಕರ್, ಮಹಾದೇವ ಶಿರಸಿಕರ್, ಮಂಜಾ ಶಿರಸಿಕರ್ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net