ಸಂಪೂರ್ಣ ಹಳ್ಳ ಹಿಡಿದ ಪಪಂ ಆಡಳಿತ

ಯಲ್ಲಾಪುರದ ಪಪಂ ಕಾರ್ಯಾಲಯದ ಎದುರು ಪಟ್ಟಣದ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಬಿಜೆಪಿ ಪ್ರಮುಖರು ಪಪಂ ಎದುರು ಸಾಂಕೇತಿಕ ಧರಣಿ ನಡೆಸಿದರು. ಹರಿಪ್ರಕಾಶ ಕೋಣೆಮನೆ, ಪ್ರಸಾದ ಹೆಗಡೆ, ಸೋಮು ನಾಯ್ಕ, ವಿನೋದ ತಳೆಕರ್, ಶ್ಯಾಮಿಲಿ ಪಾಟಣಕರ್ ಇತರರಿದ್ದರು.
ಯಲ್ಲಾಪುರದ ಪಪಂ ಕಾರ್ಯಾಲಯದ ಎದುರು ಪಟ್ಟಣದ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಬಿಜೆಪಿ ಪ್ರಮುಖರು ಪಪಂ ಎದುರು ಸಾಂಕೇತಿಕ ಧರಣಿ ನಡೆಸಿದರು. ಹರಿಪ್ರಕಾಶ ಕೋಣೆಮನೆ, ಪ್ರಸಾದ ಹೆಗಡೆ, ಸೋಮು ನಾಯ್ಕ, ವಿನೋದ ತಳೆಕರ್, ಶ್ಯಾಮಿಲಿ ಪಾಟಣಕರ್ ಇತರರಿದ್ದರು.
Published on
ಯಲ್ಲಾಪುರ: ಪಟ್ಟಣದ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ, ಶುಕ್ರವಾರ ಬಿಜೆಪಿ ಪ್ರಮುಖರು ತಮಟೆ ಬಾರಿಸಿ, ಪಪಂ ಎದುರು ಸಾಂಕೇತಿಕ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪಪಂ ಆಡಳಿತದ ವಿರುದ್ಧ ಹಾಗೂ ಶಾಸಕರ ವಿರುದ್ಧ ಘೋಷಣೆ ಕೂಗಿದರು.
ಪಕ್ಷದ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯವಿಲ್ಲ. ಇದರಿಂದ ಜನ ಸಾಮಾನ್ಯರ ಕೆಲಸಗಳಾಗದೇ ಸಮಸ್ಯೆ ಹೆಚ್ಚುತ್ತಿದೆ.
6 ವರ್ಷ ಕಳೆದರೂ ನೀರಿನ ಘಟಕ ಬಳಕೆಗೆ ಸಿಕ್ಕಿಲ್ಲ. ಬೀದಿನಾಯಿ ಕಚ್ಚಿ ಗಾಯವಾದವರಿಗೆ ನೀಡುವ ಪರಿಹಾರ ನೀಡಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ಸರಿಯಾಗಿ ನಡೆದಿಲ್ಲ. ಜಾತ್ರೆಯೊಳಗೇ ಮಾಡುತ್ತೇವೆ ಎಂದಿದ್ದ ಜಿ+2 ಮನೆ ಹಂಚಿಕೆಯ ಕಾರ್ಯ ಇನ್ನೂ ಆಗಿಲ್ಲ. ಪಟ್ಟಣದ ಆಡಳಿತ ವ್ಯವಸ್ಥೆ ಸಂಪೂರ್ಣ ಹಳ್ಳ ಹಿಡಿದಿದೆ. ಈ ಎಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹರಿಸದಿದ್ದರೆ ದೊಡ್ಡ ಪ್ರಮಾಣದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಪಟ್ಟಣದ ಶಾರದಾಗಲ್ಲಿಯಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ ಆಗಿ ನಾಲ್ಕೈದು ವರ್ಷಗಳೇ ಕಳೆದರೂ ಕಾರ್ಯಾರಂಭಗೊಂಡಿಲ್ಲ. ಇದರಿಂದ ಸ್ಥಳಿಯವಾಗಿ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ದೂರಿದರು. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ತಕ್ಷಣಕ್ಕೆ ನೀರಿನ ಘಟಕ ಕಾರ್ಯಾರಂಭ ಮಾಡಬೇಕು ಎಂದು ಪಟ್ಟುಹಿಡಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಚಂದ್ರಶೇಖರ ಹೊಸ್ಮನಿ, ಪಪಂ ಮುಖ್ಯಾಧಿಕಾರಿ ಕೇಶವ ಚೌಗಲೆ, ಲೋಕೋಪಯೋಗಿ ಇಲಾಖೆಯ ಎಇಇ ಸಂಜಯ ಪಾತ್ರೋಟ್ ಅಹವಾಲುಗಳನ್ನು ಆಲಿಸಿ, ಶಾರದಾ ಗಲ್ಲಿಯ ನೀರಿನ ಘಟಕವನ್ನು ತಕ್ಷಣ ಆರಂಭಿಸಲು ಕ್ರಮ ಕೈಗೊಂಡರು. ಘನತ್ಯಾಜ್ಯ ವಿಲೇವಾರಿ ಘಟಕ, ಬೀದಿ ನಾಯಿ ಕಚ್ಚಿ ಗಾಯಗೊಂಡರಿಗೆ ಪರಿಹಾರ, ಅಲಂಕಾರಿಕ ಬೀದಿ ದೀಪ ನಿರ್ವಹಣೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ, ಸಭೆ ಕರೆದು, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪಕ್ಷದ ಪ್ರಮುಖರಾದ ಸೋಮೇಶ್ವರ ನಾಯ್ಕ, ಶ್ಯಾಮಿಲಿ ಪಾಟಣಕರ್, ಪ್ರದೀಪ ಯಲ್ಲಾಪುರಕರ್, ನಾಗೇಶ ಯಲ್ಲಾಪುರಕರ್, ರಜತ ಬದ್ದಿ, ವಿನೋದ ತಳೆಕರ್, ಮಹೇಶ ನಾಯ್ಕ, ರಾಮು ನಾಯ್ಕ, ಸುನೀತಾ ವೆರ್ಣೆಕರ್, ರಜನಿ ಚಂದ್ರಶೇಖರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net