Not-change ಬದಲಾಗದಿರಲಿ ಸಮಾಜಕ್ಕೆ ಕನ್ನಡಿ ಹಿಡಿಯುವ ಕೆಲಸ

ದಾಂಡೇಲಿಯಲ್ಲಿ ದಾಂಡೇಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತ ಅಕ್ಷಯಗಿರಿ ಗೋಸಾವಿ, ಸಿಕಂದರ ಮುಗುಟಸಾಬ್ ತಿಗಡಿ ಹಾಗೂ ಎಂ.ಕೆ. ಮಹಾದೇವ ಕನಕಾಪುರ ಅವರನ್ನು ಸನ್ಮಾನಿಸಲಾಯಿತು. ಗಿರೀಶ ಪಟ್ಟಣಶೆಟ್ಟಿ, ಡಿವೈಎಸ್ಪಿ ಶಿವಾನಂದ ಮದರಖಂಡಿ, ನರಸಿಂಹ ಅಡಿ, ವಿವೇಕ ಬನ್ನೆ, ಟಿ.ಸಿ. ಹಾದಿಮನಿ, ಶೈಲೇಶ ಪರಮಾನಂದ, ಇತರರಿದ್ದರು.
ದಾಂಡೇಲಿಯಲ್ಲಿ ದಾಂಡೇಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತ ಅಕ್ಷಯಗಿರಿ ಗೋಸಾವಿ, ಸಿಕಂದರ ಮುಗುಟಸಾಬ್ ತಿಗಡಿ ಹಾಗೂ ಎಂ.ಕೆ. ಮಹಾದೇವ ಕನಕಾಪುರ ಅವರನ್ನು ಸನ್ಮಾನಿಸಲಾಯಿತು. ಗಿರೀಶ ಪಟ್ಟಣಶೆಟ್ಟಿ, ಡಿವೈಎಸ್ಪಿ ಶಿವಾನಂದ ಮದರಖಂಡಿ, ನರಸಿಂಹ ಅಡಿ, ವಿವೇಕ ಬನ್ನೆ, ಟಿ.ಸಿ. ಹಾದಿಮನಿ, ಶೈಲೇಶ ಪರಮಾನಂದ, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ ಅಭಿಪ್ರಾಯ
  • ಪತ್ರಿಕಾ ದಿನಾಚರಣೆ, ಗೌರವ ಸನ್ಮಾನ ಕಾರ್ಯಕ್ರಮ
ದಾಂಡೇಲಿ: ತಂತ್ರಜ್ಞಾನ ಬದಲಾಗಬಹುದು ಆದರೆ, ಮಾಧ್ಯಮದ ಮೂಲ ಧರ್ಮವಾದ ಸತ್ಯ ಹೇಳುವುದು ಮತ್ತು ಸಮಾಜಕ್ಕೆ ಕನ್ನಡಿ ಹಿಡಿಯುವ ಕೆಲಸ ಬದಲಾಗಬಾರದು ಎಂದು ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ದಾಂಡೇಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಡಿಜಿಟಲ್ ಯುಗದಲ್ಲಿ ವೇಗದ ಜೊತೆಗೆ ನಿಖರತೆಯೂ ಮುಖ್ಯವಾಗಿದೆ. ಮೊಬೈಲ್ ಇದ್ದವನು ಪತ್ರಕರ್ತನಾಗಿರುವ ಈ ಕಾಲದಲ್ಲಿ ಸುಳ್ಳು ಸುದ್ದಿ ಹರಡದಂತೆ ಎಚ್ಚರ ವಹಿಸಬೇಕು. ಅಧಿಕಾರದ ದುರ್ಬಳಕೆ, ಭ್ರಷ್ಟಾಚಾರವನ್ನು ಪ್ರಶ್ನಿಸುವುದರ ಜೊತೆಗೆ ಕಾರ್ಮಿಕ, ರೈತ ಮತ್ತು ಸಾಮಾನ್ಯ ಜನರ ಸಮಸ್ಯೆಗೆ ದನಿಯಾಗಬೇಕು ಎಂದರು.
ಡಿವೈಎಸ್ಪಿ ಶಿವಾನಂದ ಮದರಖಂಡಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರು ಪತ್ರಿಕೆ ಓದಿದರೆ ಹೆಚ್ಚು ಜ್ಞಾನ ಸಂಪಾದಿಸಬಹುದು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನರಸಿಂಹ ಅಡಿ ಮಾತನಾಡಿ, ಪತ್ರಕರ್ತರ ಬದುಕು- ಬವಣೆಗಳನ್ನು ವಿವರಿಸಿ, ಅಭದ್ರತೆಯ ನಡುವೆಯೂ ಸಮಾಜಮುಖಿಯಾಗಿ ಸಮಾಜಕ್ಕೆ ಬೆಳಕು ಚೆಲ್ಲುವ ಹಾಗೂ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಪತ್ರಕರ್ತರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದರು.
ನಗರಸಭೆ ಪೌರಾಯುಕ್ತ ವಿವೇಕ ಬನ್ನೆ, ತಾಪಂ ಇಒ ಟಿ.ಸಿ. ಹಾದಿಮನಿ ಮಾತನಾಡಿ, ದಾಂಡೇಲಿಯ ಪತ್ರಕರ್ತರು ಸಮಾಜಮುಖಿ, ಜನಮುಖಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ ಮತ್ತು ಅನುಕರಣೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತರ ಸಂಘದ ಅಧ್ಯಕ್ಷ ಗುರುಶಾಂತ ಜಡೆಹಿರೇಮಠ ಮಾತನಾಡಿ, ಜನರ ಸಮಸ್ಯೆಗಳನ್ನು ಎತ್ತಿ ಹಿಡಿಯುವುದು ಮತ್ತು ಸಮಾಜಕ್ಕೆ ದಿಕ್ಕು ತೋರಿಸುವುದೇ ಪತ್ರಕರ್ತರಾದವರ ಧರ್ಮವಾಗಿರಬೇಕು ಎಂದರು.
ತಹಸೀಲ್ದಾರ್ ಶೈಲೇಶ ಪರಮಾನಂದ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಪಿಆರ್‌ಒ ರಾಜೇಶ ತಿವಾರಿ, ಜೊಯಿಡಾ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ದೇಸಾಯಿ ಉಪಸ್ಥಿತರಿದ್ದರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಾದರಿ ಕೆಲಸ ಮಾಡಿದ ಮೂವರು ಸಾಧಕರನ್ನು ಪ್ರತಿವಷರ್ದಂತೆ ಈ ಬಾರಿಯೂ ಗೌರವಿಸಲಾಯಿತು.
ವಿಜಯವಾಣಿ ವರದಿಗಾರ ಪತ್ರಕರ್ತ ಅಕ್ಷಯಗಿರಿ ಗೋಸಾವಿ, ಸಿಕಂದರ ಮುಗುಟಸಾಬ್ ತಿಗಡಿ ಹಾಗೂ ಎಂ.ಕೆ. ಮಹಾದೇವ ಕನಕಾಪುರ ಅವರನ್ನು ಸನ್ಮಾನಿಸಲಾಯಿತು.
ಮೌಲ್ಯ ಎಸ್. ಜೈನ್ ಮತ್ತು ಮಾನ್ಯತಾ ವಾಸರೆ ಪ್ರಾರ್ಥಿಸಿದರು. ಪತ್ರಕರ್ತ ಬಿ.ಎನ್. ವಾಸರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರವೀಣಕುಮಾರ ಸುಲಾಖೆ, ಖಜಾಂಚಿ ರಾಜೇಶ ತಳೇಕರ ಹಾಗೂ ಸದಸ್ಯ ಮಂಜುನಾಥ ಅಂಬಿಗೇರ ಪರಿಚಯಿಸಿದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರವೀಣಕುಮಾರ ಸುಲಾಖೆ ನಿರ್ವಹಿಸಿದರು. ಸಂಘದ ಜಿಲ್ಲಾ ಸಮಿತಿ ಸದಸ್ಯ ಸಂದೇಶ್ ಎಸ್. ಜೈನ್ ನಿರೂಪಿಸಿದರು. ಹಿರಿಯ ಪತ್ರಕರ್ತ ಕೃಷ್ಣಾ ಪಾಟೀಲ ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net