ಅಗ್ನಿ ಅನುಗ್ರಹದಿಂದ ದುರ್ಗುಣ ನಿವೃತ್ತಿ Raghaveshwara Shree

ಗೋಕರ್ಣದ ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಅನ್ನಬ್ರಹ್ಮ ಚಾತುರ್ಮಾಸ್ಯ ನಿಮಿತ್ತ ಸೋಮವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಸಿದ್ದಾಪುರ ಹವ್ಯಕ ಮಂಡಲದ ವಿವಿಧ ವಲಯಗಳಿಂದ ಆಯೋಜಿತವಾದ ಶ್ರೀಗುರುಭಿಕ್ಷಾ ಸೇವೆ ಪ್ರಯುಕ್ತ ಸುರೇಶ ವೆಂಕಟ್ರಮಣ ಹೆಗಡೆ ದಂಪತಿ ಚಾತುರ್ಮಾಸ್ಯ ವ್ರತಧಾರಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ (Raghaveshwara Shree)ಅವರಿಗೆ ಪೂರ್ಣಫಲ ಸಮರ್ಪಿಸಿ ಆಶೀರ್ವಾದ ಪಡೆದರು.
ಗೋಕರ್ಣದ ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಅನ್ನಬ್ರಹ್ಮ ಚಾತುರ್ಮಾಸ್ಯ ನಿಮಿತ್ತ ಸೋಮವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಸಿದ್ದಾಪುರ ಹವ್ಯಕ ಮಂಡಲದ ವಿವಿಧ ವಲಯಗಳಿಂದ ಆಯೋಜಿತವಾದ ಶ್ರೀಗುರುಭಿಕ್ಷಾ ಸೇವೆ ಪ್ರಯುಕ್ತ ಸುರೇಶ ವೆಂಕಟ್ರಮಣ ಹೆಗಡೆ ದಂಪತಿ ಚಾತುರ್ಮಾಸ್ಯ ವ್ರತಧಾರಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ (Raghaveshwara Shree)ಅವರಿಗೆ ಪೂರ್ಣಫಲ ಸಮರ್ಪಿಸಿ ಆಶೀರ್ವಾದ ಪಡೆದರು.
Published on

ಯುಕ್ತವಾದ ಉಪವಾಸಕ್ಕೆ ಅಗ್ನಿಯ ಸಹಯೋಗ ಮತ್ತು ಸಹಕಾರ ಪ್ರಧಾನ ಶಕ್ತಿ.

ಅಂದರೆ ಪಾಪಕಾರಕಗಳಾದ ಕೆಡಕು ಮತ್ತು ದುರ್ಗುಣಗಳಿಂದ ಉಪಾವೃತ್ತಿ ಅಥವಾ ಹಿಂದಕ್ಕೆ ಬರುವುದು ಮತ್ತು ಸುಗುಣಿಗಳ ಮತ್ತು ಸುಗುಣದಾಯಕ ಭಗವಂತನ ಜತೆಗೆ ವಾಸ ಮಾಡುವುದು ಇದೇ ಉಪವಾಸ ಎಂದು ಅನ್ನಬ್ರಹ್ಮ ಚಾತುರ್ಮಾಸ್ಯ ವ್ರತಬದ್ಧರಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ (

Raghaveshwara Shree)

ನುಡಿದರು.

ಅಶೋಕೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ಸೋಮವಾರ ಧರ್ಮಸಭೆಯಲ್ಲಿ ಶ್ರೀಗಳು ಅಗ್ನಿ ಸಂವಾದ ಅಥವಾ ಅಗ್ನಿಯ ಜತೆ ಮಾತುಕತೆ ಸಂಬಂಧ ಪ್ರವಚನವನ್ನು ಅನುಗ್ರಹಿಸಿದರು.
ಅಗ್ನಿ ಮತ್ತು ಮನಸು: ದೇಹದ ಹಸಿವೆಗೆ ಶರೀರದ ಅಗ್ನಿ ಕಾರಣ. ಉಪವಾಸ ಸಾರ್ಥಕ್ಯಕ್ಕೂ ಇದೇ ಅಗ್ನಿ ಕಾರಣ ಮತ್ತು ಪ್ರೇರಣ.
ಇಂತಹ ಅಗ್ನಿಗೂ ಮನಸಿಗೂ ಆಪ್ತವಾದ ಗಾಢ ಸಂಬಂಧವಿದೆ. ಮನಸು ಕೊರಗಿದರೆ ಒಳಗಿನ ಅಗ್ನಿ ಸೊರಗುತ್ತದೆ. ಇದು ಕೇವಲ ಭಾವನಾತ್ಮಕ ನಿರ್ಣಯವಲ್ಲ. ಇದಕ್ಕೆ ವೈಜ್ಞಾನಿಕ ಪ್ರಯೋಗದ ಬಲ ಮತ್ತು ಬೆಂಬಲವಿದೆ ಎಂದರು.

ತಮಸೋ ಮಾ ಜ್ಯೋತಿರ್ಗಮಯ

ಅಗ್ನಿಗೂ ಮನಸಿಗೂ ಸಂಬಂಧ ಇರುವಂತೆ ಮನಸಿಗೂ ಉಪವಾಸಕ್ಕೂ ಬಂಧನದ ನಂಟಿದೆ.
ಮನಸಿಗೆ ಮುಂದಕ್ಕೆ ಮತ್ತು ಹಿಂದಕ್ಕೆ ಹೋಗುವ ಉಭಯ ಗತಿಯಿದೆ. ಮುಂದೆ ಹೋದರೆ ಪ್ರಾಪಂಚಿಕವಾದ ಪ್ರವೃತ್ತಿಯ ಮಾರ್ಗ.
ಹಿಂದಕ್ಕೆ ಹೋದರೆ ಅಥವಾ ವೀಕ್ಷಿಸಿದರೆ ನಿವೃತ್ತಿಯ ದೈವಿಕ ಮಾರ್ಗ. ಮನಸು ದೈವಿಕವಾದ ಹಿಂದಿನ ದಾರಿಯತ್ತ ಸಾಗದಿರುವುದಕ್ಕೆ ಪ್ರಪಂಚ ಮತ್ತು ಪ್ರಾಪಂಚಿಕ ಲಭ್ಯ ಆಹಾರ ಕಾರಣ. ಅದಕ್ಕೆ ಸಾರ್ವತ್ರಿಕವಾಗಿ ಎಲ್ಲ ಮನಸೂ ಮುಂದೆ ನೋಡುತ್ತದೆ.
ಆದರೆ ಆಹಾರದಿಂದ ಮುಕ್ತವಾಗುವ ಉಪವಾಸ ಮಾತ್ರ ಮನಸನ್ನು ಹಿಂದೆ ಸಾಗುವಂತೆ ಮಾಡುತ್ತದೆ ಎಂದರು. ನಿರಾಹಾರ ಅಥವಾ ಉಪವಾಸದ ಉದ್ದೇಶ ತಮಸೋ ಮಾ ಜ್ಯೋತಿರ್ಗಮಯ.ಕತ್ತಲೆಯ ಕಾಡಿನಿಂದ ಜ್ಯೋತಿರ್ಮಯಿಯಾದ ಭಗವಂತೆನೆಡೆಗೆ ಸಾಗುವುದು.
ಅಂಧಕಾರಕ್ಕೆ ಮೂಲವಾದ ಚಿತ್ತವೃತ್ತಿ ಅಥವಾ ಮನಸ್ಸಿನ ಚಂಚಲ ಅಲೆಗಳಿಗೆ ಆಹಾರವೇ ಪ್ರೇರಕ. ಸಮಸ್ತ ಆಹಾರ ಪ್ರಪಂಚವೇ ತಮೋಗುಣದ ರಾಶಿ.
ಆಹಾರ ನಿಗ್ರಹಿಸಿ ಉಪವಾಸವನ್ನು ಪ್ರೇರೇಪಿಸಿದರೆ ತಮಸ್ಸು ಅಥವಾ ಅಂಧಕಾರ ಕ್ಷೀಣಿಸುತ್ತದೆ. ಕಾರಣ ಮನಸು ಮುಂದಕ್ಕೆ ಹೋಗದಂತೆ ಮತ್ತು ನೋಡದಂತೆ ನಿಗ್ರಹಿಸಬೇಕು ಎಂದು ಶ್ರೀಗಳು ವಿವರಿಸಿದರು.
ಧರ್ಮಸಭೆಯಲ್ಲಿ ಸಿದ್ದಾಪುರ ಹವ್ಯಕ ಮಂಡಲದ ವಿವಿಧ ವಲಯಗಳ ವತಿಯಿಂದ ಶ್ರೀ ಗುರುಭಿಕ್ಷಾ ಸೇವೆ ಸಮರ್ಪಿತವಾಯಿತು. ವಲಯಗಳ ವತಿಯಿಂದ ಸುರೇಶ ವೆಂಕಟ್ರಮಣ ಹೆಗಡೆ ಶ್ರೀಗಳಿಗೆ ಪೂರ್ಣಫಲ ಸಮರ್ಪಿಸಿದರು.
ಈ ವೇಳೆ ಹವ್ಯಕ ಮಂಡಲದ ಸತೀಶ ಹೆಗಡೆ ಆಲ್ಮನೆ, ರಾಮಮೂರ್ತಿ ಹೆಗಡೆ ಗೋಳಗೋಡು, ಸೀತಾರಾಮ ಹೆಗಡೆ ಸುಳಗಾರು, ಕಲ್ಪನಾ ತಲವಾಟ, ಚಿದಂಬರ ಗೋಳಿಕೈ, ವೀಣಾ ಭಟ್ಟ ಶಿರಸಿ, ಮನು ಪಟೇಲ, ಪ್ರತಿಭಾ ಅಂಗಡಿ, ನವೀನ ಯಾಣ, ದರ್ಶನ ಹೆಗಡೆ ಕಂತನಳ್ಳಿ, ದಿನಪ್ರಧಾನ ರಾಮ ಬಾಲಕೃಷ್ಣ ಹೆಗಡೆ ಬಡಗಣಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net