ಕಲ್ಯಾಣ ಮಂಟಪದ ತುಂಬೆಲ್ಲ ಚೌತಿಯ ಕಜ್ಜಾಯಗಳ ಮ ಮ ವಾಸನೆ ಹಬ್ಬಿತ್ತು. ಮಲೆನಾಡಿನ ತಾಲೂಕುಗಳ ಮೂಲೆ ಮೂಲೆಯಿಂದ ಆಗಮಿಸಿದ್ದ ಮಹಿಳೆಯರು ಚಕ್ಕುಲಿ, ಅತ್ರಾಸಕ, ಕೋಡುಬಳೆ, ಕಜಿರ್ಕಾಯಿ ಸೇರಿದಂತೆ 30ಕ್ಕೂ ಅಧಿಕ ವಿಧದ ತಿಂಡಿಗಳನ್ನು ಸಿದ್ಧಪಡಿಸಿ ತಂದಿದ್ದರು. ಒಂದೆಡೆ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದ್ದರೆ, ಇನ್ನೊಂದಿಷ್ಟು ಮಹಿಳೆಯರು ಸ್ಪರ್ಧೆಗಾಗಿ ಈ ರುಚಿಕರ ತಿಂಡಿಗಳನ್ನು ಸಿದ್ಧಪಡಿಸಿ ತಂದಿದ್ದರು. ಕಾರ್ಯಕ್ರಮಕ್ಕೆ ತೋಟಗಾರರ ಕಲ್ಯಾಣ ಸಂದ ಉಪಾಧ್ಯ ಎಂ.ವಿ. ಜೋಶಿ ಚಾಲನೆ ನೀಡಿದರು.