ಬೆಳಗಾವಿ ಮೂಲದ ಪರಿಸರ ಹೋರಾಟಗಾರ ಗಿರಿಧರ ಕುಲಕರ್ಣಿ ಅವರು ಪರಿಸರ ಮಂತ್ರಾಲಯಕ್ಕೆ ಪತ್ರ ಬರೆದು, ಕ್ವಾರಿ ಅನುಮತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೈಗಾ ಅಣು ವಿದ್ಯುತ್ ಸ್ಥಾವರಕ್ಕಾಗಿ 1994ರಲ್ಲಿ ಪಡೆದ, ಕಾರವಾರ ಡಿಸಿಎಫ್ ಶಿಫಾರಸಿರುವ ಅನುಮತಿಯನ್ನೇ ಮತ್ತೆ ಸಲ್ಲಿಸಲಾಗಿದೆ. ಅರಣ್ಯ, ವನ್ಯಜೀವಿ ಮಂಡಳಿಯ ಅನುಮೋದನೆ ಪಡೆಯದೇ ನೇರವಾಗಿ ಕೇಂದ್ರ ಸರ್ಕಾರಕ್ಕೆ ಪ್ರಾಥಮಿಕ ಅನುಮೋದನೆಗೆ ಸಲ್ಲಿಸಲಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದೆ.