ಸಾರ್ವಜನಿಕರು, ವ್ಯಾಪಾರಸ್ಥರು, ಪ್ಲಾಸ್ಟಿಕ್ ಬಾಟಲಿ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಗಟಾರದಲ್ಲಿ ಚೆಲ್ಲುತ್ತಿರುವುದರಿಂದ ಗಟಾರ ತುಂಬಿ ತುಳುಕುವಂಥ ಸ್ಥಿತಿ ತಲುಪುತ್ತದೆ. ದಯವಿಟ್ಟು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಪ್ರತಿದಿನ ಬರುವ ಕಸ ಸಂಗ್ರಹಕಾರರಿಗೆ ಕಸಗಳನ್ನು ಕೊಟ್ಟು ಸಹಕರಿಸಬೇಕು. ನಾವೆಲ್ಲರೂ ಸ್ವಚ್ಛತೆಯ ಬಗ್ಗೆ ಹೆಚ್ಚು ಜಾಗರೂಕರಾಗಿ ಇರಬೇಕು. ಎಲ್ಲೆಂದರಲ್ಲಿ ತ್ಯಾಜ್ಯವನ್ನು ಚೆಲ್ಲದೇ ನಗರದ ಸ್ವಚ್ಛತೆಗೆ ನಗರಸಭೆ ಹಾಗೂ ತಾಲೂಕು ಆಡಳಿತದ ಜೊತೆ ಎಲ್ಲರೂ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಶೈಲೇಶ ಪರಮಾನಂದ ಹಾಗೂ ಪೌರಾಯುಕ್ತ ವಿವೇಕ ಬನ್ನೆ ಮನವಿ ಮಾಡಿದರು.