

ಪ್ರಮುಖ ಮುಖ್ಯಾಂಶಗಳು
ಭಟ್ಕಳ:
ನಮ್ಮ ಪೀಠಾಧಿಪತ್ಯಕ್ಕೆ ಹಿರಿಯ ಗುರುಗಳ ಸಂಪೂರ್ಣ ಕೃಪೆ, ಆಶೀರ್ವಾದ ಹಾಗೂ ಮಾರ್ಗದರ್ಶನವೇ ಕಾರಣ. ಪರ್ತಗಾಳಿಯ ಶ್ರೀರಾಮ ದೇವರ ಭವ್ಯ ಕಂಚಿನ ಪ್ರತಿಮೆಗೆ ಲಭಿಸಿರುವ ದಾಖಲೆ ಪ್ರಮಾಣಪತ್ರಗಳನ್ನು ನಮ್ಮ ಹಿರಿಯ ಗುರುಗಳಿಗೆ ಸಮರ್ಪಿಸುತ್ತೇವೆ. ಈ ಗೌರವ ಅವರ ಪಾದಕಮಲಗಳಿಗೆ ಸೇರಬೇಕು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪರಮಪೂಜ್ಯ ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.