ಸೇಂಟ್‌ ಮಿಲಾಗ್ರಿಸ್‌ಗೆ 9.11 ಕೋಟಿ ಲಾಭ

st milagris
ಸೇಂಟ್‌ ಮಿಲಾಗ್ರಿಸ್‌ ಸೊಸೈಟಿಯ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಿತು.st milagris
Published on: 

ಕಾರವಾರ: ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 2025-26 ನೇ ಆರ್ಥಿಕ ವರ್ಷದಲ್ಲಿ 9.11 ಕೋಟಿ ಲಾಭ ಗಳಿಸಿದೆ ಎಂದು ಸಹಕಾರಿಯ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ತಿಳಿಸಿದರು.

ಸಹಕಾರಿಯ ಫಿನಿಕ್ಸ್ ಪ್ಯಾರಾಡೈಸ್ ಸಭಾಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸರ್ವ ಸಾಧಾರಣ ಸಭೆಯಲ್ಲಿ ಅವರು ಸಹಕಾರಿಯ ಮಹತ್ವವನ್ನು ವಿವರಿಸಿದರು. ಸಂಘದಲ್ಲಿ 3,22 ಲಕ್ಷ ಷೇರು ಸದಸ್ಯರಿದ್ದು, ಅವರಿಗೆ ಶೇ.8 ರಷ್ಟು ಲಾಭಾಂಶ ನೀಡಲಾಗುತ್ತದೆ ಎಂದು ಘೋಷಿಸಿದರು.

ಮಲ್ಲಾಪುರದಲ್ಲಿ ಮೊದಲ ಶಾಖೆ ಪ್ರಾರಂಭಿಸುವ ಮೂಲಕ ತನ್ನ ವಿಸ್ತರಣೆಯ ಹೆಜ್ಜೆ ಇಟ್ಟ ಸೇಂಟ್ ಮಿಲಾಗ್ರಿಸ್, ರಾಜ್ಯಾದ್ಯಂತ ಒಟ್ಟು 111 ಶಾಖೆಗಳನ್ನು ಹೊಂದಿ ರಾಜ್ಯದ ಪ್ರಮುಖ ಸಹಕಾರಿ ಸಂಸ್ಥೆಯಾಗಿ ಬೆಳೆದಿದೆ. ಅದರ ಹಿಂದೆ ಸದಸ್ಯರ ಕೊಡುಗೆ ಪ್ರಮುಖವಾಗಿದೆ ಎಂದರು. 1,605 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದ್ದು, ಯಾಗಿದ್ದು, 1,316 ಕೋಟಿ ರೂ. ಸಾಲ ನೀಡಲಾಗಿದೆ. 53.74 ಕೋಟಿ ರೂ.ಷೇರು ಬಂಡವಾಳವಿದೆ. ಸಾಲಗಾರರಿಗೆ ಮರಣೋತ್ತರ ಋಣ ಪರಿಹಾರ ನಿಽ ಯೋಜನೆ ಜಾರಿಯಲ್ಲಿದೆ. ಇದುವರೆಗೆ 16 ಸಾಲಗಾರರ ಪ್ರಕರಣಗಳಲ್ಲಿ ಒಟ್ಟು 16.36 ಲಕ್ಷ ಮೊತ್ತದ ಕ್ಲೆÊಮ್ ಪಾವತಿಸಲಾಗಿದೆ. ಸಂಸ್ಥೆಯಲ್ಲಿ ಪ್ರಸ್ತುತ 1,308 ಸಿಬ್ಬಂದಿ ಹಾಗೂ 312 ಪಿಗ್ಮಿ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗೆ ಗ್ರೂಪ್ ಇನ್ಶುರೆನ್ಸ್ ಯೋಜನೆಯನ್ನೂ ಜಾರಿಗೊಳಿಸಲಾಗಿದೆ. ಇದುವರೆಗೆ 18 ಕ್ಲೆÊಮ್‌ಗಳಲ್ಲಿ 10.62 ಲಕ್ಷದ ಪ್ರಯೋಜನ ದೊರೆತಿದೆ ಎಂದು ವಿವರಿಸಿದರು.

ವಂದನೀಯ ಫಾದರ್ ಡೆಸ್ಮಂಡ್ ರೆಬೆಲ್ಲೊ ಅವರು ಬೈಬಲ್ ವಾಚಿಸಿ, ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಸಂಸ್ಥೆಯ ಮೇಲೆ ಸದಸ್ಯರು ಇಟ್ಟಿರುವ ವಿಶ್ವಾಸ, ನಂಬಿಕೆ, ಸಿಬ್ಬಂದಿ ಮತ್ತು ಗ್ರಾಹಕರ ನಡುವಿನ ಉತ್ತಮ ಬಾಂಧ್ಯವ ಸೇರಿದಂತೆ ಹಲವು ಕಾರಣಗಳಿಂದ ಸೇಂಟ್ ಮಿಲಾಗ್ರಿಸ್ ಸಹಕಾರಿ ಸಂಸ್ಥೆ ಇಂದು ಉನ್ನತ ಮಟ್ಟಕ್ಕೆ ಬೆಳೆದು ನಿಂತಿದೆ ಎಂದರು.

ಸಹಕಾರಿಯ ನಿರ್ದೇಶಕ ಜುಜೆ ಫರ್ನಾಂಡಿಸ್ ಮಾತನಾಡಿದರು. ಪ್ರಧಾನ ವ್ಯವಸ್ಥಾಪಕಿ ರಾಜೇಶ್ವರಿ ರಾಯ್ಕರ್ ಸಭೆಯ ವಿಷಯಪಟ್ಟಿ ಹಾಗೂ ವಾರ್ಷಿಕ ವರದಿಯನ್ನು ಮಂಡಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ನವೀನ್ ವೆರ್ಣೇಕರ್ ಹಾಗೂ ಸಾಲ ವಸೂಲಾತಿ ವ್ಯವಸ್ಥಾಪಕರಾದ ಅರುಣ ನಾಯ್ಕ್ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಸಂಬAಸಿದ ಅಗತ್ಯ ಮಾಹಿತಿಯನ್ನು ಸಭೆಯ ಮುಂದಿಟ್ಟರು. ವ್ಯವಸ್ಥಾಪಕ ನಿರ್ದೇಶಕಿ ಡೆಮಿ ಫರ್ನಾಂಡಿಸ್ ಸ್ವಾಗತಿಸಿದರು. ಪ್ರಧಾನ ಕಚೇರಿಯ ಠೇವಣಿ ವಿಭಾಗದ ಅಕಾರಿ ವಿನಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ವಿಭಾಗದ ಸಿಬ್ಬಂದಿ ಉಷಾ ಮುದಗೇಕರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net