ಹಳಿಯಾಳ ತಾಲೂಕಿನ ಬಿದ್ರಳ್ಳಿಯ ಕೇಶವ ಪಾಂಡುರಂಗ ಕಿತ್ತೂರಕರ್ ಎಂಬುವವರು ಆಸ್ತಿಯಲ್ಲಿ ತನ್ನ ಪಾಲು ಕೇಳಿದ್ದರು. ಅಕ್ಷಯ ಯಾನೆ, ಆಕಾಶ ಪಾಂಡುರಂಗ ಕಿತ್ತೂರಕರ್, ಪಾಂಡುರಂಗ ಕೀರಪ್ಪ ಕಿತ್ತೂರಕರ್ ಹಾಗೂ ಲತಾ ತುಳಸಾಯಿ ಪಾಂಡುರಂಗ ಕಿತ್ತೂರಕರ್ ಸೇರಿದಂತೆ 5 ಜನರು ಸೇರಿ ಆಸ್ತಿಯಲ್ಲಿ ಪಾಲು ಕೊಡದೇ ಜಗಳ ತೆಗೆದಿದ್ದರು. ಜಗಳ ತಾರಕಕ್ಕೇರಿ ಕೇಶವ ಕಿತ್ತೂರಕರ್‌ನನ್ನು ಭೀಕರವಾಗಿ ಕೊಲೆ ಮಾಡಿದ್ದರು. ಈ ಕುರಿತಂತೆ ಅಂದಿನ ತನಿಖಾಧಿಕಾರಿ ಹಳಿಯಾಳದ ಪೊಲೀಸ್ ನಿರೀಕ್ಷಕ ಬಿ.ಎಸ್. ಲೋಕಾಪುರ 2019ರ ಅಕ್ಟೋಬರ್ 15ರಂದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.